ಸಾರ್ವಜನಿಕ ಸಮಸ್ಯೆಗಳಿಗೂ ಒಂದೊಂದಾಗಿ ಪರಿಹಾರ ದೊರಕಿಸಲಾಗುತ್ತಿದೆ : ಶ್ರೀನಿವಾಸ ಮಾನೆ
Public problems are also being solved one by one: Srinivas Mane
ಹಾನಗಲ್ 23 : ಅಭಿವೃದ್ಧಿಗೆ ಕೊನೆ ಇಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಕ್ಷೇತ್ರದ ಜನರ ಒತ್ತಾಸೆಯಂತೆ ಅಭಿವೃದ್ಧಿ ಕಾರ್ಯಗಳ ಜೊತೆಗೆ ಜನಕಲ್ಯಾಣಕ್ಕೂ ಗಮನ ಹರಿಸಲಾಗಿದೆ. ಹತ್ತು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಸಮಸ್ಯೆಗಳಿಗೂ ಒಂದೊಂದಾಗಿ ಪರಿಹಾರ ದೊರಕಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಕಲ್ಲಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 64 ಲಕ್ಷ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಅವರು, ಎಲ್ಲೋ ಕುಳಿತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಪದ್ಧತಿಗೆ ತಾಲೂಕಿನಲ್ಲಿ ತಿಲಾಂಜಲಿ ನೀಡಲಾಗಿದೆ.
ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಅಗತ್ಯವಿರುವ ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿದ್ದ 50 ಕೋಟಿ ರೂ. ಅನುದಾನ ಇದೇ ಮಾದರಿಯಲ್ಲಿ ಹಂಚಿಕೆ ಮಾಡಿದ್ದು, ಮತ್ತೀಗ ಬಿಡುಗಡೆಯಾಗಿರುವ 25 ಕೋಟಿ ರೂ. ಅನುದಾನ ಸಹ ಪ್ರತಿ ಗ್ರಾಮಗಳಿಗೂ ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದ ಅವರು 13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಶಾಶ್ವತ ಮನೆ ಮಾಲಿಕತ್ವ ನೀಡಲಾಗುತ್ತಿದೆ.
ಈ ಕಾರ್ಯದಲ್ಲಿ ಹಾನಗಲ್ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಸತ್ತಾರಸಾಬ, ರಜಾಕ್ ಹೊಂಬರಡಿ, ಮಂಜುನಾಥ ತರವಂದ, ವಸಂತ ದೊಡ್ಡಕೇರಿ, ಯಲ್ಲಪ್ಪ ಹೆಗ್ಗಣ್ಣನವರ, ಕುಮಾರಸ್ವಾಮಿ ಪಾಟೀಲ, ಲೋಕೇಶ ಹುಲಿ, ಗುಡ್ಡಪ್ಪ ಬ್ಯಾತನಾಳ, ಸಿದ್ದಪ್ಪ ಬಂಗೇರ, ಬಸವರಾಜ ಬಡೆಮ್ಮನವರ, ಸಂತೋಷ ಭೋವಿ, ಭರಮಗೌಡ ಚನ್ನಗೌಡ್ರ, ದೇವೇಂದ್ರ್ಪ ಕುರುಡಿ, ಮಲ್ಲಪ್ಪ ಯತ್ನಳ್ಳಿ, ಗಂಗಪ್ಪ ಕುರುಡಿ, ಮಾಲತೇಶ ಕುನ್ನೂರ, ಮಂಜಪ್ಪ ಶೇಷಗಿರಿ, ವೀರುಪಾಕ್ಷಪ್ಪ ಸಮ್ಮಸಗಿ, ಯಲ್ಲಪ್ಪ ಸಿರಿಗೆರೆ, ಶಿವು ತಳವಾರ ಸೇರಿದಂತೆ ಅನೇಕರಿದ್ದರು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 