ಅಂತರರಾಷ್ಟ್ರೀಯ

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅಧಿಕೃತ ನಿವಾಸದ ಸ್ವಿಮ್ಮಿಂಗ್ ಫೂಲ್ ನಲ್ಲಿ ಪ್ರತಿಭಟನಾಕಾರರ ಈಜಾಟ

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅಧಿಕೃತ ನಿವಾಸದ ಸ್ವಿಮ್ಮಿಂಗ್ ಫೂಲ್ ನಲ್ಲಿ ಪ್ರತಿಭಟನಾಕಾರರ ಈಜಾಟ

ಕೊಲಂಬೊ: ಜುಲೈ 09:ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಕೊಲಂಬೊದಲ್ಲಿನ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ ಗಂಟೆಗಳ ನಂತರ ಸಾವಿರಾರು ಪ್ರತಿಭಟನಾಕಾರರು ಕಾಂಪೌಂಡ್ ಒಳಗೆ ನುಗ್ಗಿ, ಕೆಲವು ಪ್ರಯಿಭಟನಾಕಾರರು ಕೊಳದಲ್ಲಿ ಈಜಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಶ್ರೀಲಂಕಾದಲ್ಲಿ ಪ್ರತಿಭಟನಾಕಾರರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ನಿವಾಸವನ್ನು ಆಕ್ರಮಿಸಿಕೊಂಡಿದ್ದಾರೆ.

ಇನ್ನು ಇದೇ ವೇಳೆ ಕೆಲವು ಪ್ರತಿಭಟನಾಕಾರರು ಬಾವುಟ ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರೆ, ಇನ್ನು ಕೆಲವರು ಪ್ರತಿಭಟನಾಕಾರರು ಈಜುತ್ತಿರುವುದನ್ನು ವೀಡಿಯೋ ಮಾಡುತ್ತಿದ್ದಾರೆ.

ಆರ್ಥಿಕ ವಿನಾಶದಿಂದ ರಾಷ್ಟ್ರವನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ವೈಫಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ದೇಶದಾದ್ಯಂತದ ಪ್ರತಿಭಟನಾಕಾರರು ಬಸ್‌ಗಳು, ರೈಲುಗಳು ಮತ್ತು ಟ್ರಕ್‌ಗಳಲ್ಲಿ ಆಗಮಿಸುವ ಮೊದಲು ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಸುದ್ದಿ ಓದಿ