ಅಂತರರಾಷ್ಟ್ರೀಯ

ಲಂಡನ್‌ನಲ್ಲಿ ಕೋವಿಡ್ ಲಸಿಕೆ ವಿರೋಧಿಸಿ ಪ್ರತಿಭಟನೆ; ಪೊಲೀಸರಿಗೆ ಗಾಯ

ಲಂಡನ್‌ನಲ್ಲಿ ಕೋವಿಡ್ ಲಸಿಕೆ ವಿರೋಧಿಸಿ ಪ್ರತಿಭಟನೆ; ಪೊಲೀಸರಿಗೆ ಗಾಯ

ಲಂಡನ್, ಸೆ 4   ಲಂಡನ್‌ನಲ್ಲಿ ಕರೋನವೈರಸ್ ಲಸಿಕೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಜನರೊಂದಿಗೆ ಘರ್ಷಣೆಯಲ್ಲಿ ಐದು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ಶುಕ್ರವಾರ ತಿಳಿಸಿವೆ.
ಪ್ರತಿಭಟನಾಕಾರರು ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿಯ ಪ್ರಧಾನ ಕಚೇರಿಗೆ ನುಗ್ಗಲು ಯತ್ನಿಸಿದಾಗ ಘರ್ಷಣೆ ಉಂಟಾಗಿದ್ದು, ಕೆಲವರನ್ನು ಬಂಧಿಸಲಾಗಿದೆ.
ಈ ವಿಡಿಯೋ ತುಣುಕುಗಳನ್ನು ಟ್ವೀಟ್ ಮಾಡಿರುವ ಪೊಲೀಸರು, ಕ್ಯಾನರಿ ವಾರ್ಫ್ ಮತ್ತು ದಕ್ಷಿಣ ಕೆನ್ಸಿಂಗ್ಟನ್‌ನಲ್ಲಿ ಪ್ರತಿಭಟನಾ ಗುಂಪನ್ನು ಚದುರಿಸುವಾಗಿ ಐದು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ