ಮೂಡಲಗಿ

ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಮೂಡಲಗಿ 22: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಪಾಲಕರು ತಾಲೂಕಿನ ಹಳ್ಳೂರ ಗ್ರಾಮದ ನಿಪ್ಪಾಣಿ-ಮುಧೋಳ ರಸ್ತೆಯಲ್ಲಿ ಬಸ್‍ಗಳ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ ಮಾತನಾಡಿ. ಹಳ್ಳೂರ, ಶಿವಾಪೂರ, ಖಾನಟ್ಟಿ, ಮುನ್ಯಾಳ, ಕಪ್ಪಲಗುದ್ದಿ, ಸೈದಾಪೂರ ಗ್ರಾಮಗಳಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಇಲ್ಲದರಿಂದ ವಿದ್ಯಾರ್ಥಿಗಳು  ಶಾಲಾ, ಕಾಲೇಜುಗಳಿಗೆ ಹೋಗದೆ ಮನೆಗೆ ವಾಪಸ್ ಬರುತ್ತಿದ್ದಾರೆ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಶೀಘ್ರವಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ದೃಷ್ಟಿಯಿಂದ ತಾಲೂಕಿನ ಗ್ರಾಮಗಳಿಗೆ ಸಮರ್ಪಕ ಬಸ್ ಸಂಚಾರ ಸೌಲಭ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಒಂದು ವರ್ಷದಿಂದ ಕೋರೊನಾದಿಂದ ನಮ್ಮ ಶಿಕ್ಷಣ ಹಾಳಾಗಿದೆ. ಇವಾಗ ಕಾಲೇಜು ಪ್ರಾರಂಭವಾಗಿದ್ದು ಕಳೆದ ಶಿಕ್ಷಣ ಮತ್ತೇ ಕಲಿಯಬೇಕೆಂದು ಆಸಕ್ತಿಯಿಂದ ಬಂದರೇ ಸರಿಯಾದ ಬಸ್ ಇಲ್ಲದೇ ತಡವಾಗಿ ಕಾಲೇಜಿಗೆ ಹೋಗಬೇಕು. ನಾವು ಹೋಗುವಷ್ಟರಲ್ಲಿ ಎರಡು ಕ್ಲಾಸ್‍ಗಳು ಮುಗಿದು ಹೋಗಿರುತ್ತವೆ ಇದರಿಂದ ನಮ್ಮ ಶಿಕ್ಷಣ ಹಾಳಾಗಿಹೋಗುತ್ತಿದೆ.

ಹಳ್ಳೂರ ಗ್ರಾಮದಲ್ಲಿ ನಡೆದ ಪ್ರತಿಭಟನೆಯ ಬ್ಗಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಆದಷ್ಟು ಶೀಘ್ರದಲ್ಲಿ ಸಮರ್ಪಕ ಬಸ್ ಸಂಚಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸುದ್ದಿ ಓದಿ