ಇತರ ಜಾತಿಗೆ ಪ.ಪಂ ಪ್ರಮಾಣಪತ್ರ ವಿರೋದಿಸಿ ಪ್ರತಿಭಟನೆ
ಕಾಗವಾಡ, 18 ; ತಾಲೂಕಿನ ವಾಲ್ಮೀಕಿ ಸಮಾಜ ವತಿಯಿಂದ ತಾಲೂಕಿನಲ್ಲಿ ಇತರ ಜಾತಿಗೆ ಪರಿಶಿಷ್ಟ ಪಂಗಡ ಜಾತಿಯ ಪ್ರಮಾಣಪತ್ರ ಪೂರೈಸುತ್ತಿರುವ ಅಧಿಕಾರಿಗಳ ವಿರುದ್ಧ ಕಾಗವಾಡ ವಾಲ್ಮೀಕಿ ಸಮಾಜ ತಾಲೂಕು ವತಿಯಿಂದ ಪ್ರತಿಭಟನೆ ಕೈಗೊಂಡಿದ್ದಾರೆ.
ಸೋಮವಾರ ದಿ. 18 ರ ಬೆಳಗ್ಗೆಯಿಂದ ತಹಶೀಲರ ಕಚೇರಿದರು ಮಳೆಯನ್ನು ಲೆಕ್ಕಿಸದೆ ವಾಲ್ಮೀಕಿ ಸಮಾಜದ ತಾಲೂಕ ಘಟಕದ ಪದಾಧಿಕಾರಿಗಳು ಹಾಗೂ ಸಮುದಾಯ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಗವಾಡ ತಾಲೂಕಾ ವಾಲ್ಮೀಕಿ ಸಮಾಜ ಅಧ್ಯಕ್ಷ ರಮೇಶ್ ನಾಯ್ಕ್ ಮಾತನಾಡಿ, ಸರ್ಕಾರದ ಆದೇಶ ಇದ್ದರು ಸಹ ಬೇರೆ ಜಾತಿಯವರಿಗೆ ನಕಲಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ವಿತರಿಸುತ್ತಿದ್ದಾರೆ ಇದರಿಂದ ನಮ್ಮ ಸಮಾಜದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಈ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ಮುಖಂಡರು, ನ್ಯಾಯವಾದಿ ಪ್ರವೀಣ ಕೆಂಪವಾಡೆ ಮಾತನಾಡಿ ಸ್ಥಳೀಯ ದಂಡಾಧಿಕಾರಿಗಳಿಂದ ನಕಲಿ ಪ್ರಮಾಣ ಪತ್ರ ವಿತರಿಸಲಾಗಿದೆ ಇದನ್ನು ತಡೆಯಬೇಕು ಇಲ್ಲವಾದಲ್ಲಿ ನಾವು ಉಗ್ರವಾದ ಹೋರಾಟ ಕೈಗೊಳ್ಳುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ನಾಯಕ್ ಸಮಾಜದ ಉಪಾಧ್ಯಕ್ಷ ಸದಾಶಿವ್ ನಾಯ್ಕ್, ಸಂತೋಷ್ ಮಗದುಮ್, ಪಿರ್ಪ ನಾಯ್ಕ್, ಅಶೋಕ್ ಮಾಕನ್ನವರ್, ರಮೇಶ್ ನಾಯ್ಕ್, ರಮೇಶ್ ದೊಡ್ಮನಿ, ಮಾದೇವ್ ನಾಯ್ಕ್, ಅಣ್ಣಪ್ಪ ಪಟಾಯತ, ಸುರೇಶ್ ನಾಯ್ಕ್, ಪರಸು ನಾಯ್ಕ್, ರಮೇಶ್ ಪೂಜಾರಿ, ಶಿವಲಿಂಗ ನಾಯಕ, ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.