ಬೈಲಹೊಂಗಲ: ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಆಪ್ತ ಸಮಾಲೋಚನಾ ಸಭೆ
ಲೋಕದರ್ಶನ ವರದಿ
ಬೈಲಹೊಂಗಲ 19: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯ ಹಾಗೂ ಕ್ಷೇತ್ರ ಸಮನ್ವಯಧಿಕಾರಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸಂಪಗಾವ ಗ್ರಾಮದ ಸರಕಾರಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಲಿ-ಕಲಿ ಮತ್ತು ದೈಹಿಕ ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಆಪ್ತ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಎಸ್.ಡಿ.ಗಂಗನ್ನವರ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಸಿ ಬೇಕಾದರೆ ದಾಖಲಾತಿಯನ್ನು ಹೆಚ್ಚಿಸಿಕೊಳ್ಳಬೇಕು. ಶಾಲಾ ಸೌಂದರ್ಯ ಆಕರ್ಷಕ, ಬೋಧನೆಯೊಂದಿಗೆ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸಳೆಯಬೇಕು ಎಂದರು.
ನಲಿಕಲಿ ಹಾಗೂ ಬಿಆರ್ಸಿ ಅಧಿಕಾರಿ ಆಶೋಕ ಜಕಾತಿ ಮಾತನಾಡಿ, ಶಾಲಾ ಕೋಣೆಗಳಲ್ಲಿ ಕಲಿಕೆ ವಾತಾವರಣ ನಿಮರ್ಾಣ ಮಾಡಿ ನಲಿಕಲಿ ವಿದ್ಯಾಥರ್ಿಗಳು ಸುಲಭವಾಗಿ ವಿವಿಧ ಭಾಷಾ ಕಲಿಯುವಂತೆ ನಲಿಕಲಿ ಶಿಕ್ಷಕರು ಪ್ರೇರೆಪಿಸಬೇಕು ಎಂದರು.
ಸಿಆರ್ಪಿ ಐ.ಬಿ.ಹಿರೇಮಠ, ಡಿ,ವ್ಹಿ,ಗೌಡಪ್ಪನ್ನವರ, ಬಿ.ಜಿ.ಠಕಾಯಿ, ಎಸ್.ಎಸ್. ದೇಶನೂರ ಇವರು ನಲಿ ಕಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು, ಹಣ್ಣಿಕೇರಿ, ಸಂಪಗಾವ, ನೇಗಿನಹಾಳ, ಚಿಕ್ಕಬಾಗೆವಾಡಿ ಮೊದಲಾದ ಶಾಲಾ ಕ್ಲಷ್ಟರ್ ವ್ಯಾಪ್ತಿಯ ಶಿಕ್ಷಕರು ಭಾಗವಹಿಸಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 