ನಿವೃತ್ತ ಉಪಪ್ರಾಚಾರ್ಯರಿಗೆ ಬೀಳ್ಕೊಡುವ ಸಮಾರಂಭ

ನಿವೃತ್ತ ಉಪಪ್ರಾಚಾರ್ಯರಿಗೆ ಬೀಳ್ಕೊಡುವ ಸಮಾರಂಭ Farewell ceremony for retired vice-principals

ತಾಳಿಕೋಟಿ 31 : ನಿಸ್ವಾರ್ಥ ಸೇವೆ ಸಲ್ಲಿಸಿ ವಿಶ್ವಾಸ ಮತ್ತು ವಿಧೇಯ ಗುಣದಿಂದಾಗಿ ಸಂಸ್ಥೆಯ ಪದಾಧಿಕಾರಿಗಳ ಪ್ರೀತಿ ಪಡೆದರು, ಸ್ನೇಹಮಯಿ ಸ್ವಭಾವದಿಂದಾಗಿ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಮನಸ್ಸುಗೆದ್ದರು ಮಮತಾಮಯಿ ಸ್ವಭಾವದದಿಂದಾಗಿ ವಿದ್ಯಾರ್ಥಿಗಳಿಗೆ ಮೆಚ್ಚುಗೆಗೆ ಪಾತ್ರರಾದರು ಎಂದು ಪದವಿ ಪೂರ್ವ ಕಾಲೇಜು ಚೇರಮನ್ ಎಮ್‌.ಆರ್‌.ಕತ್ತಿ ನುಡಿದರು ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಎಸ್‌.ಕೆ.ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಜಗದೀಶ ಸಿದ್ರಾಮಪ್ಪ ಕಟ್ಟಿಮನಿ ಅವರ ಸೇವಾ ನಿವೃತ್ತಿ ಬೀಳ್ಕೊಡುವ ಸಮಾರಂಭದ ಅತಿಥಿಯಾಗಿ ಮಾತನಾಡುತ್ತ ಹೇಳಿದರು. ಹಿರಿಯ ಶಿಕ್ಷಕ ಎ.ಎಚ್‌.ಹೂಗಾರ ಮಾತನಾಡುತ್ತ ಕಟ್ಟಿಮನಿ ಅವರು ಸರಳತೆ ಸಹಜತೆ ಯನ್ನು ಕೊಂಡಾಡಿ ಇಲಾಖೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ತಿಳಿಸಿದರು.

ಎಸ್‌.ಕೆ.ಕೆ.ಪಿ.ಎಮ್‌.ಜಿ.ಸಿ.ಎಮ್‌.ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ ಮಾತನಾಡುತ್ತ ಜೆ.ಎಸ್‌.ಕಟ್ಟಿಮನಿ ಸತತ 22 ವರ್ಷ ಸಹ ಶಿಕ್ಷಕರಾಗಿ 2 ವರ್ಷ ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಯ ಪಡೆದರು, ಇಲಾಖೆ ಮತ್ತು ಶಾಲೆಯ ಸಂಬಂಧ ಉತ್ತಮ ವಾಗಿ ಕಾಪಾಡಿಕೊಂಡು ಬಂದರು, ಸರಳ ಸ್ವಭಾವದ ಅವರು ವಿದ್ಯಾರ್ಥಿಗಳ ಮನಸ್ಸುಗೆದ್ದರು ಎಂದು ಹೇಳುತ್ತ ಅನೇಕ ನೆನಪುಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕಿಶೋರಕುಮಾರ ತಮ್ಮ ಅಧ್ಯಕ್ಷೀಯ ಮಾತನಾಡುತ್ತ ಕಟ್ಟಿಮನಿ ಅವರೊಂದಿಗಿನ ತಮ್ಮ ಒಡನಾಟ ಸ್ಮರಿಸಿಕೊಂಡರು.ಕಾರ್ಯಕ್ರಮದಲ್ಲಿ ನಿವೃತ್ತ ಉಪಪ್ರಾಚಾರ್ಯ ಎಮ್‌.ಎಸ್‌.ಬಿರಾದಾರ ಹಾಗೂ ಉಪನ್ಯಾಸಕರು,ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.ಎಸ್‌.ಎಮ್‌.ಪಾಟೀಲ ಸ್ವಾಗತಿಸಿದರು.ಆರಿ​‍್ಜ.ರಾಠೋಡ ನಿರೂಪಣೆ ಮಾಡಿದರು.