ಶ್ರೀನಿಧಿ ಸಣ್ಣಕ್ಕಿ ಐಐಟಿ ಮದ್ರಾಸಿಗೆ ಆಯ್ಕೆ

 ಶ್ರೀನಿಧಿ ಸಣ್ಣಕ್ಕಿ ಐಐಟಿ ಮದ್ರಾಸಿಗೆ ಆಯ್ಕೆ Srinidhi Sannakki selected for IIT Madras

ಲೋಕದರ್ಶನ ವರದಿ 

ಮೂಡಲಗಿ 31 : ಬೆಳಗಾವಿ ಜಿಲ್ಲೆಯ ಮೂಡಲಗಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ವಿಭಾಗದ ವಿದ್ಯಾರ್ಥಿನಿಯಾದ ಶ್ರೀಯುತ ಶ್ರೀನಿಧಿ ಸಣ್ಣಕ್ಕಿಯವರು ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಸ್ನಾತಕೋತ್ತರ ಜಂಟಿ ಪ್ರವೇಶ ಪರೀಕ್ಷೆ (ಎಂಒ)  ಪರೀಕ್ಷೆಯಲ್ಲಿ  ಅಖಿಲ ಬಾರತ ಮಟ್ಟದಲ್ಲಿ 408 ನೆಯ ಸ್ಥಾನವನ್ನು ಗಳಿಸಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿಗೆ ದೇಶದ ಅಗ್ರಗಣ್ಯ ಸಂಸ್ಥೆಯಾದ ಐಐಟಿ ಮದ್ರಾಸಿಗೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಹಿರಿಮೆಯನ್ನು ತಂದಿರುತ್ತಾರೆ. ಇವರು ಮೂಡಲಗಿ ಪಟ್ಟಣದ ನಿವಾಸಿಗಳಾದ ಸುರೇಖಾ ಮತ್ತು  ಶಿವಬಸು ಸಣ್ಣಕ್ಕಿ ಅವರ ಹೆಮ್ಮೆಯ ಪುತ್ರಿ. ಶ್ರೀಯುತರ ಈ ಸಾಧನೆಗೆ ಮಹಾವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಸರ್ವ ಸದಸ್ಯರು, ಪ್ರಾಂಶುಪಾಲರಾದ ಮಹೇಶ ಕಂಬಾರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಕೋರಿರುತ್ತಾರೆ.