ಅಂತರರಾಷ್ಟ್ರೀಯ

ಬಹರೇನ್ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ...!

ಬಹರೇನ್ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ...!

ಮನಾಮಾ, ನವೆಂಬರ್ 12: ಬಹರೇನ್  ದೇಶವನ್ನು ಸುಮಾರು  ಐದು ದಶಕಗಳ  ಕಾಲ ಪ್ರಧಾನ ಮಂತ್ರಿಯಾಗಿ  ಆಡಳಿತ  ನಡೆಸಿದ್ದ  ಷೇಕ್  ಖಲಿಫಾ ಬಿನ್  ಸಲ್ಮಾನ್ ಅಲ್ ಖಲಿಫಾ ( 84) ಬುಧವಾರ ಅನಾರೋಗ್ಯದಿಂದಾಗಿ ನಿಧನರಾದರು. ಇದರಿಂದ ಅವರ ಸ್ಥಾನದಲ್ಲಿ ಬಹರೇನ್  ಹೊಸ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ನೇಮಕಗೊಳಿಸಲಾಗಿದೆ.

ಈ ಸಂಬಂಧ  ಬಹರೇನ್  ರಾಜ ಹಮದ್  ಬಿನ್ ಖಲೀಫಾ   ಆದೇಶ ಹೊರಡಿಸಿದ್ದಾರೆ. ಅಧಿಕೃತ  ಗೆಜೆಟ್  ಪ್ರಕಟಗೊಂಡ ಕೂಡಲೇ ರಾಯಲ್  ಆದೇಶ  ಜಾರಿಗೆ ಬರಲಿದೆ. ನಂತರ ಫ್ರಿನ್ಸ್ ಸಲ್ಮಾನ್ ಪ್ರಧಾನಿಯಾಗಿ   ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಪ್ರಿನ್ಸ್  ಸಲ್ಮಾನ್  ಪ್ರಸ್ತುತ ಡೆಪ್ಯೂಟಿ ಕಮಾಂಡರ್  ಆಗಿದ್ದಾರೆ.  ಇನ್ನೂ ಅನಾರೋಗ್ಯದಿಂದ  ಅಮೆರಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ಖಲೀಫಾ .. ಪ್ರಪಂಚದಲ್ಲಿಯೇ  ಅತ್ಯಧಿಕ ಕಾಲ   ದೇಶವೊಂದರ ಪ್ರಧಾನಿ ಯಾಗಿ ಸೇವೆ ಸಲ್ಲಿಸಿದ  ನಾಯಕರೆಂಬ ದಾಖಲೆ ನಿರ್ಮಿಸಿದ್ದಾರೆ.

ಸುದ್ದಿ ಓದಿ