ಡೆಸ್ಮಂಡ್ ಟುಟು ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ನವದೆಹಲಿ, ಡಿ ೨೬: ಕ್ರೈಸ್ತ ಧರ್ಮಗುರು ಆರ್ಚ್‌ಬಿಷಪ್ ಎಮಿರೈಟರ‍್ಸ್ ಡೆಸ್ಮಂಡ್ ಟುಟು ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್ಚ್‌ಬಿಷಪ್ ಟುಟು ಅವರು, ಜಗತ್ತಿನ ಕೋಟ್ಯಂತರ ಜನರ ಪಾಲಿಗೆ ದಾರಿ ದೀಪವಾಗಿದ್ದರು. ಮಾನವ ಘನತೆ ಮತ್ತು ಸಮಾನತೆಯಡೆಗಿನ ಕೊಡುಗೆಗಾಗಿ ಅವರು ಸದಾ ಸ್ಮರಣೀಯ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.