ಅಂತರರಾಷ್ಟ್ರೀಯ

ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಜೊತೆ ಪ್ರಧಾನಿ ಮೋದಿ ಚಾಯ್ ಪೇ ಚರ್ಚಾ

ಬ್ರಿಟನ್‌  ಪ್ರಧಾನಿ ಕೀರ್‌ ಸ್ಟಾರ್ಮರ್‌ ಜೊತೆ ಪ್ರಧಾನಿ ಮೋದಿ ಚಾಯ್ ಪೇ ಚರ್ಚಾ

ನವದೆಹಲಿ 25 ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಕೀರ್‌ ಸ್ಟಾರ್ಮರ್‌ ಜೊತೆ ಭಾರತದ ವ್ಯಕ್ತಿ ತಯಾರಿಸಿದ ಚಹಾ ಸವಿದಿದ್ದಾರೆ. 

ಈ ಕುರಿತು ಮೋದಿ ಫೋಟೊ ಹಂಚಿಕೊಂಡಿದ್ದು, ‘ಚೆಕರ್ಸ್‌ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ‘‘ಚಾಯ್ ಪೇ ಚರ್ಚಾ’... ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.’... ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಭಾರತ ಮೂಲದ ಅಖಿಲ್ ಪಟೇಲ್‌ ಉಭಯ ನಾಯಕರಿಗೆ ಚಹಾ ತಯಾರಿಸಿ ಕೊಟ್ಟಿದ್ದಾರೆ. ‘ಈ ವಿಶೇಷ ಚಹಾದಲ್ಲಿ ಮಸಾಲೆಗಳ ಮಿಶ್ರಣವಿದೆ. ಈ ಮಸಾಲೆ ಚಹಾದ ಮೂಲ ಭಾರತವಾಗಿದೆ. ಚಹಾ ಪುಡಿ ಅಸ್ಸಾಂ ರಾಜ್ಯದ್ದು, ಮಸಾಲೆ ಕೇರಳದ್ದಾಗಿದೆ. ಅಲ್ಲದೆ ಇದಕ್ಕೆ ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಶುಂಠಿ ಪುಡಿಯನ್ನು ಸೇರಿಸಲಾಗಿದೆ’ ಎಂದು ವಿವರಿಸಿದ್ದಾರೆ. ಅಖಿಲ್‌, ಮೋದಿ ಮತ್ತು ಸ್ಟಾರ್ಮರ್‌ ಅವರಿಗೆ ಮಸಾಲೆ ಚಹಾವನ್ನು ನೀಡಿದ್ದು, ‘ಈ ವಿಶೇಷ ಚಹಾದಲ್ಲಿ ಮಸಾಲೆಗಳ ಮಿಶ್ರಣವಿದೆ. ಈ ಮಸಾಲೆ ಚಹಾದ ಮೂಲ ಭಾರತವಾಗಿದೆ. ಚಹಾ ಪುಡಿ ಅಸ್ಸಾಂ ರಾಜ್ಯದ್ದು, ಮಸಾಲೆ ಕೇರಳದ್ದಾಗಿದೆ. ಅಲ್ಲದೆ ಇದಕ್ಕೆ ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಶುಂಠಿ ಪುಡಿಯನ್ನು ಸೇರಿಸಲಾಗಿದೆ’ ಎಂದು ವಿವರಿಸಿದ್ದಾರೆ. 

ಈ ವೇಳೆ ಮೋದಿ, ಸ್ಟಾರ್ಮರ್‌ ಅವರಿಗೆ ‘ನೀವು ಭಾರತದ ರುಚಿ ಸವಿಯಲಿದ್ದೀರಿ’ ಎಂದು ಹೇಳಿದ್ದು, ಇಬ್ಬರೂ ಚಹಾ ಸವಿದಿದ್ದಾರೆ.

ಸುದ್ದಿ ಓದಿ