ರಷ್ಯಾ 9000 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಹೇಳ್ತಾರೆ; ಆದ್ರೆ ರಷ್ಯಾ ಹೇಳೋ ಲೆಕ್ಕ 498!
ಕೈವ್ 03 : ರಷ್ಯಾದ ಪಡೆಗಳು ಉಕ್ರೇನಿಯನ್ ನಡುವಿನ ಸಮರವು ೮ನೇ ದಿನವೂ ಮುಂದುವರೆದಿದ್ದು, ಈ ಎರಡು ರಾಷ್ಟ್ರಗಳ ನಡುವೆ ಮಾತುಕತೆಗಳು ಮುಂದುವರೆದಿವೆ. ಕೇವಲ ಏಳು ದಿನಗಳ ಯುದ್ಧದಲ್ಲಿ ಒಂದು ಮಿಲಿಯನ್ ಉಕ್ರೇನಿಯನ್ನರು ದೇಶವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ (ಯುಎನ್) ಹೇಳುತ್ತಿದ್ದಂತೆ ಎರಡೂ ದೇಶಗಳು ತಮ್ಮದೇ ಆದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿವೆ.ಎರಡು ರಾಷ್ಟ್ರಗಳು ಭೀಕರ ಯುದ್ಧದಲ್ಲಿ ತೊಡಗಿರುವಾಗ ಈ ಎರಡೂ ರಾಷ್ಟ್ರಗಳ ಸಾವು ನೋವುಗಳ ಸಂಖ್ಯೆಯ ವರದಿಯಾಗಿವೆ.ಕಳೆದ ವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಸಾವುನೋವುಗಳ ಬಗ್ಗೆ ಮಾಹಿತಿ ನೀಡಿದ ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್‌ನಲ್ಲಿ ತನ್ನ 498 ಸಿಬ್ಬಂದಿಗಳನ್ನು ಕೊಲ್ಲಲಾಗಿದೆ ಮತ್ತು 1,597 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.ಆದಾಗ್ಯೂ, ‘ಶತ್ರು’ ರಾಷ್ಟ್ರ ಉಕ್ರೇನ್ ತನ್ನ 6,000 ಸಿಬ್ಬಂದಿಯನ್ನು ಕಳೆದುಕೊಂಡಿದೆ ಎಂದು ಹೇಳಿದ ಒಂದು ದಿನದ ನಂತರ, ರಷ್ಯಾ ತನ್ನ ಸುಮಾರು 9,000 ಸೈನಿಕರನ್ನು ಕಳೆದುಕೊಂಡಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ಹೇಳಿದ್ದಾರೆ.ಇದುವರೆಗೆ 2,000ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ಬುಧವಾರ ಹೇಳಿದೆ. ಅಲ್ಲದೇ ಮಕ್ಕಳು, ಮಹಿಳೆಯರು ಮತ್ತು ನಮ್ಮ ರಕ್ಷಣಾ ಪಡೆಗಳು ಪ್ರತಿ ಗಂಟೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಕಳೆದ ಏಳು ದಿನಗಳಲ್ಲಿ ರಷ್ಯಾದ ಪಡೆಗಳು ಆಸ್ಪತ್ರೆಗಳು, ಮನೆಗಳು ಮತ್ತು ಶಿಶುವಿಹಾರಗಳನ್ನು ನಾಶಪಡಿಸಿವೆ ಎಂದು ಅದು ಹೇಳಿದೆ.ಇತ್ತೀಚೆಗಷ್ಟೇ, ದಕ್ಷಿಣ ನಗರವಾದ ಖರ್ಸನ್ ಅನ್ನು ರಷ್ಯಾ ಯಶಸ್ವಿಯಾಗಿ ವಶಪಡಿಸಿಕೊಂಡಿದೆ ಎಂದು ಉಕ್ರೇನ್ ದೃಢಪಡಿಸಿತು. ಏತನ್ಮಧ್ಯೆ, ರಷ್ಯಾದ ಪಡೆಗಳು ಕೈವ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ನಲ್ಲಿ ನಿರಂತರವಾಗಿ ಬಾಂಬ್ ಸ್ಫೋಟಗಳು ನಡೆಯುತ್ತಿವೆ.