ಸಂಭಾವ್ಯ ಪ್ರವಾಹ ಎದುರಿಸಲು ಸಜ್ಜಾಗಿ
ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಚಿಕ್ಕೋಡಿ ಎಸಿ..!
ಕಾಗವಾಡ 27: ತಾಲೂಕಿನಲ್ಲಿ ಸಂಭಾವ್ಯ ಪ್ರವಾಹ ಎದುರಿಸಿ, ಮುಂಜಾಗ್ರತ ಕ್ರಮ ಕೈಗೊಂಡು, ಆಗತಕ್ಕ ಹಾನಿಯನ್ನು ತಪ್ಪಿಸಲು ತಾಲೂಕಿನ ಎಲ್ಲ ಅಧಿಕಾರಿಗಳು ಶ್ರಮಿಸಬೇಕು. ಪ್ರವಾಹ ಭೀತಿ ಇರುವ ಗ್ರಾಮಗಳಿಗೆ ನೊಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದ್ದು, ಪ್ರತಿಯೊಬ್ಬರು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾಂವಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅವರು, ಮಂಗಳವಾರ ದಿ. 27 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಳೆ ಮತ್ತು ಪ್ರವಾಹ ಮುಂಜಾಗ್ರತೆ ಕುರಿತು ಕರೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ತಾಲೂಕಿನ 8 ಗ್ರಾಮಗಳನ್ನು ಸೂಕ್ಷ್ಮವೆಂದು ಗುರಿತಿಸಲಾಗಿದ್ದು, ಪ್ರವಾಹ ಪರಿಸ್ಥಿತಿ ತಲೆದೂರಿದರೇ ಜನ-ಜಾನುವಾರಗಳ ಸ್ಥಳಾಂತರ, ಮೇವು, ಕುಡಿಯುವ ನೀರು ಮತ್ತು ಕಾಳಜಿ ಕೇಂದ್ರ ತೆರೆಯಲಾಗುವುದು. ತಾಲೂಕಿನಲ್ಲಿ ಒಟ್ಟು 8 ಬೋಟ್‌ಗಳು ಇದ್ದು, ಅವುಗಳನ್ನು ಸುಸ್ಥಿತಯಲ್ಲಿ ಇಡಲಾಗಿದೆ. ಅಗತ್ಯ ಬಿದ್ದಲ್ಲಿ ಎನ್‌ಡಿಎಫ್‌ಆರ್ ತಂಡಗಳು ಕಾರ್ಯ ನಿರ್ವಹಿಸಲಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಯ ತೋರಬಾರದು. ಮತ್ತು ಸ್ಥಳದಲ್ಲಿಯೇ ಇದ್ದು, ಸಾರ್ವಜನಿಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಸೂಚಿಸಿದರು.
ಇನ್ನೂ ನದಿ ತೀರದ ಗ್ರಾಮಗಳ ಜನರು ಎಚ್ಚರಿಕೆ ವಹಿಸಬೇಕು. ನದಿ ದಡಕ್ಕೆ ತಮ್ಮ ಜಾನುವಾರಗಳನ್ನು ತೊಳೆಯಲು ಮತ್ತು ಬಟ್ಟೆ ತೊಳೆಯಲು ಹೋಗಬಾರದು. ಪ್ರವಾಹ ನಿರ್ವಹನೆಗಾಗಿ ನೇಮಕಗೊಂಡಿರುವ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಸೂಚಿಸಿದರು.
ಇನ್ನೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ಸಮಯದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಬಿಇಓ ಎಂ.ಆರ್. ಮುಂಜೆ, ಸಿಡಿಪಿಓ ಸಂಜೀವಕುಮಾರ ಸದಲಗಿ, ಪಿಡಬ್ಲ್ಯೂಡಿಯ ಜಯಾನಂದ ಹಿರೇಮಠ, ಬಸವರಾಜ ಮಗದುಮ್ಮ, ಆರ್‌ಎಪ್‌ಓ ರಾಕೇಶ ಅರ್ಜನವಾಡ, ಮಲ್ಲಿಕಾರ್ಜುನ ನಾಮದಾರ, ಪ್ರಶಾಂತ ಪೋತದಾರ, ಮಹಾಂತೇಶ ಕೌವಲಾಪೂರ, ಕೆ.ಕೆ. ಗಾವಡೆ, ಎ.ಡಿ. ಅನ್ಸಾರಿ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪ.ಪಂ.ನ ಮುಖ್ಯಾಧಿಕಾರಿಗಳು, ಎಲ್ಲ ಗ್ರಾಮಗಳ ಪಿಡಿಒಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 