ಹುಕ್ಕೇರಿ

ಹುಕ್ಕೇರಿ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಹುಕ್ಕೇರಿ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಹುಕ್ಕೇರಿ 12: ಮಹಾಮಾರಿ ಕರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಾತ್ರೆಗಳನ್ನು ಸರಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು. ಜಾತ್ರಾ ಕಮಿಟಿಯವರು ಆದೇಶದ ಪಾಲನೆ ಮಾಡಿ ಬಹುತೇಕ ಎಲ್ಲ ದೊಡ್ಡ ಜಾತ್ರೆಗಳನ್ನು ರದ್ದುಗೊಳಿಸಿತ್ತು. ಇದೀಗ ಎಲ್ಲ ದೇವಸ್ಥಾನಗಳಲ್ಲಿ ಅನ್ನ ಪ್ರಸಾದ, ಪೂಜಾ ಪುನಸ್ಕಾರ, ಜಾತ್ರೆ ಹಾಗೂ ರಥೋತ್ಸವಗಳನ್ನು ಮಾಡಲು ಧರ್ಮದತ್ತಿ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಹುಕ್ಕೇರಿ ನಗರದ ಗ್ರಾಮದೇವತೆ ಮಹಾಲಕ್ಷ್ಮೀ (ದ್ಯಾಮವ್ವಾ) ಜಾತ್ರಾ ಮಹೋತ್ಸವ ಈ ವರ್ಷ ಬರುವ 6 ಎಪ್ರೀಲïರಿಂದ 10 ಎಪ್ರೀಲï ವರೆಗೆ ಜರುಗಲಿದ್ದು ಅದನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲು ಜಾತ್ರಾ ಕಮಿಟಿ ವತಿಯಿಂದ ಶುಕ್ರವಾರದಂದು (ದಿ.12) ಮಹಾಲಕ್ಷ್ಮೀ ಮಂದಿರದಲ್ಲಿ ಜಾತ್ರಾ ಹಕ್ಕದಾರರು, ಪಂಚರು ಹಾಗೂ ಸಾರ್ವಜನಿಕರ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಪಾರಂಪಾರಿಕ ಪದ್ಧತಿ ಹಾಗೂ ಸರಕಾರದ ಮಾರ್ಗಸೂಚಿಯಂತೆÉ ಜಾತ್ರೆ ಮಾಡಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು. ಜಾತ್ರಾ ಕಮಿಟಿ ಸದಸ್ಯರು ಸೋಮವಾರದಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ ಅಧೀಕ್ಷರಿಗೆ ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದಾರೆ. ನಂತರ ಜಾತ್ರೆ ಯಾವ ರೀತಿ ಆಚರಿಸಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗುವದು. ಬಸವರಾಜ ನಾಯಿಕ ಅವರು ಮಾತನಾಡಿ ಪ್ರತಿ ಸಲದಂತೆ ಜಾತ್ರೆ ಮಾಡುವದಾದರೆ ಮಾಡೋಣ ಇಲ್ಲವಾದರೆ ಜಾತ್ರೆ ಬೇಡವೆಂದರು. ಜಾತ್ರೆ ಅದ್ಧೂರಿಯಾಗಿ ನಡೆಯಬೇಕೆಂದು ಅವರು ತಮ್ಮ ಅಭಿಪ್ರಾಯ ಸೂಚಿಸಿದಾಗ ಎಲ್ಲರೂ ಅದಕ್ಕೆ ಸಮ್ಮತಿ ಸೂಚಿಸಿದರು. ಇದೇ ಸಂದಂರ್ಭದಲ್ಲಿ ನಗರಾಧ್ಯಕ್ಷ ಅಣ್ಣಪ್ಪ ಪಾಟೀಲ ಹಾಗೂ ಉಪಾಧ್ಯಕ್ಷ ಆನಂದ ಗಂಧ ಇವರನ್ನು ಜಾತ್ರಾ ಕಮಿಟಿ ವತಿಯಿಂದ ಸತ್ಕರಿಸಸಲಾಯಿತು.

ಜಾತ್ರಾ ಕಮಿಟಿ ಅಧ್ಯಕ್ಷ ಸಂಜು ನಾಯಿಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದಸ್ಯ ಮಹಾವೀರ ನಿಲಜಗಿ, ಜಯಗೌಡ ಪಾಟೀಲ, ಪಿಂಟು ಶೆಟ್ಟಿ, ಅಶೋಕ ಕೋರಿ, ಡಾ. ಉದಯ ಕಣಗಲಿಕರ, ಗುರು ಕುಲಕರ್ಣಿ, ರಾಜು ಕುಲಕರ್ಣಿ, ಗಿರೀಶ ಕುಲಕರ್ಣಿ, ನಂದು ಗಜಬರ, ಬಿ.ಬಿ.ರಜಪೂತ, ಚಿದಾನಂದ ಬಸ್ತವಾಡೆ, ಭೀಮಶಿ ಗೋರಖನಾಥ, ಅಣ್ಣಾಗೌಡ ಪಾಟೀಲ, ರಾಜು ಚೌಗಲಾ, ಅಜ್ಜಪ್ಪ ಚೌಗಲಾ, ಭೀಮಶಿ ಗೋರಖನಾಥ, ಭೀಮಣ್ಣಾ ಮುದಕನ್ನವರ, ಚಂದ್ರಶೇಖರ ಮಲಕಾರ, ಶಿವಪ್ಪ ಮುದಕನ್ನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬಾಬು ನಾಯಿಕ ಸ್ವಾಗತಿಸಿದರು. ಸಂಜು ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಶಿ ಮುದಕನ್ನವರ ವಂದಿಸಿದರು.


ಸುದ್ದಿ ಓದಿ