ನಾಳೆ ಮಹರ್ಷಿ ವಾಲ್ಮೀಕಿ ದಿನಾಚರಣೆಯ ಪೂರ್ವಭಾವಿ ಸಭೆ

ಲೋಕದರ್ಶನ ವರದಿ

ಶಿಗ್ಗಾವಿ 09:  ಶ್ರೀ ಮಹರ್ಷಿ ವಾಲ್ಮೀಕಿ ದಿನಾಚರಣೆಯನ್ನು ದಿ: 28ರಂದು   ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಜಯಂತಿ ಆಚರಣೆಯ ರೂಪುರೇಷೆಗಳನ್ನು ತಯಾರಿಸಲು ದಿ. 11.10.2023 ರಂದು ಮುಂಜಾನೆ  11.30 ಘಂಟೆಗೆ, ತಹಶೀಲ್ದಾರ ಕಾರ್ಯಲಯದ ಸಭಾಭವನದಲ್ಲಿ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ. ಕಾರಣ ಸದರಿ ಸಭೆಗೆ ತಾಲೂಕಿನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಲ್ಲಾ ಚುನಾಯಿತ ಪ್ರತಿನಿಧಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು, ಗಣ್ಯ ವ್ಯಕ್ತಿಗಳು, ಎಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ದಲಿತ ಒಕ್ಕೂಟದ ಪ್ರತಿನಿಧಿಗಳು, ಹಾಗೂ ಇತರೆ ಸಂಘಟಿತ ಸದಸ್ಯರು ಸದರ ಸಭೆಗೆ  ಹಾಜರಾಗಿ ತಮ್ಮ ಸಲಹೆ, ಸೂಚನೆ ನೀಡಲು ಸದಸ್ಯ, ಕಾರ್ಯದರ್ಶಿ ಹಾಗೂ ಸಹಾಯಕ   ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ  ಮಹರ್ಷಿ ವಾಲ್ಮೀಖಿ ಜಯಂತ್ಯೋತ್ಸವ  ಆಚರಣೆ ಸಮಿತಿ, ಶಿಗ್ಗಾಂವ ಪ್ರಕಟಣೆಗೆ ಕೋರಿದ್ದಾರೆ.