ಸೌಲಭ್ಯಗಳ ಒದಗಿಸಿ ಶೀಘ್ರ ಉದ್ಘಾಟನೆಗೆ ಒತ್ತಾಯ


ಕೊಪ್ಪಳ 31: ನಗರದ ಜಿಲ್ಲಾ ಆಸ್ಪತ್ರೆಯ ಹಿಂದಿನ ಜಾಗೆಯಲ್ಲಿ ನೂರು ಹಾಸಿಗೆಯ ಕಟ್ಟಡ ಸೇವೆಗೆ ಸಿದ್ಧವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅರವತ್ತು ಹಾಸಿಗೆ ಮತ್ತು ಸಿಬ್ಬಂದಿ ಮಂಜೂರಾಗಿದ್ದನ್ನು ವಿರೋಧಿಸಿ. ನೂರು ಹಾಸಿಗೆಗೆ ಬೇಕಾಗುವ ಸಲಕರಣೆಗಳು ವೈದ್ಯಕೀಯ ಯಂತ್ರಗಳು ಸಾಮಾಗ್ರಿಗಳು, ಉಪಕರಣಗಳು, ವೈದ್ಯಾಧಿಕಾರಿಗಳು ತಜ್ಞ ವೈದ್ಯರು. ಸಿಬ್ಬಂದಿಗಳು ಮಂಜೂರಾತಿ ನೀಡಿ ತಕ್ಷಣ ಆಸ್ಪತ್ರೆ ಉದ್ಘಾಟನೆ ಗೊಳಿಸಬೇಕೆಂದು ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್‌. ಎ. ಗಫಾರ್‌. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಿ. ಚಿಕೇನಕೊಪ್ಪ. ಆದರ್ಶ ಕುಸ್ತಿ  ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಸಾದಿಕ್ ಅಲಿ ದಫೇದಾರ್ ಪೈಲ್ವಾನ್‌. ಮೌಲಾ ಹುಸೇನ ಹಣಗಿ ಮುಂತಾದವರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.    


 ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ ಐದುನೂರು ದಿಂದ ಆರು ನೂರು ವರೆಗೂ ಹೇರಿಗೆಗಳಾಗುತ್ತಿದ್ದು. ಸುತ್ತ ಮುತ್ತಲಿನ ಜಿಲ್ಲೆಗಳು ಜನರಿಗೂ ಅನುಕೂಲಕರವಾಗಿದೆ.  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾಕ್ಕೆ ಬಂದಾಗ ಕೊಪ್ಪಳ ನಗರಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಬೇಕೆಂದು ಮೊದಲ ಬಾರಿಗೆ ನಮ್ಮ ಸಂಘಟನೆಗಳಿಂದ ಮನವಿ ಅರ​‍್ಿಸಲಾಗಿತ್ತು. ಅದೇ ಮನವಿಯ ಪ್ರತಿಯನ್ನು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಶಾಸಕರಿಗೆ ನೀಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿಸಿ ಎಂದು ಹೇಳಿದಾಗ. ಅಗತ್ಯವಿಲ್ಲ ಮೆಡಿಕಲ್ ಕಾಲೇಜ್ ಮಂಜೂರಾಗಿದೆ. ಅದರಲ್ಲಿ ಎಲ್ಲ ವಿಭಾಗಗಳು ಇರುತ್ತದೆ ಎಂದು ಹೇಳಿದ್ದರು. ಅಷ್ಟಕ್ಕೆ ಬಿಡದೆ ಮತ್ತೆ ನಮ್ಮ ಸಂಘಟನೆಗಳಿಂದ 22/09/ 2017ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ನಿವಾಸಕ್ಕೆ ಬಂದಾಗ ಮನವಿ ಪತ್ರ ನೀಡಿ ಮನವರಿಕೆ ಮಾಡಲಾಗಿತ್ತು. ಆಗ ಐವತ್ತು ಹಾಸಿಗೆಯ ಆಸ್ಪತ್ರೆ ಮಂಜೂರು ಮಾಡಿದ್ದರು. ಅದಕ್ಕೆ ವಿರೋಧ ಮಾಡಿ ನೂರು ಹಾಸಿಗೆ ಆಸ್ಪತ್ರೆ ಮಂಜೂರು ಮಾಡುವಂತೆ ಒತ್ತಾಯಿಸಿ ನಿರಂತರ ಮನವಿಗಳನ್ನು ನೀಡುತ್ತ ಬಂದಿದ್ದರಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವಧಿ ಮುಗಿಯುವ ಒಂದು ತಿಂಗಳ ಮುಂಚೆ ಕೊಪ್ಪಳದ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿಯ ಜಾಗೆಯಲ್ಲಿ ನೂರು ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಸ್ಥಳೀಯ ಶಾಸಕರಿಂದ ಅಡಿಗಲ್ಲು ಹಾಕಲಾಗಿತ್ತು. ಇದೀಗ ಕಟ್ಟಡ ನಿರ್ಮಾಣಗೊಂಡು ಸೇವೆಗೆ ಸಿದ್ಧವಾಗಿದೆ. ಆದರೆ  ನೂರು ಹಾಸಿಗೆಯ ಕಟ್ಟಡಕ್ಕೆ ಅರವತ್ತು ಹಾಸಿಗೆಯ ಸಿಬ್ಬಂದಿ ವರ್ಗ ಮಂಜೂರಾತಿ ನೀಡಿದ್ದು. ಸರ್ಕಾರ ತಕ್ಷಣ ಮರುಪರೀಶೀಲಿಸಿ ನೂರು ಹಾಸಿಗೆಯ ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಯಂತ್ರ ಉಪಕರಣಗಳು. ತಜ್ಞ ವೈದ್ಯರು. ಸಿಬ್ಬಂದಿ ವರ್ಗ ಮಂಜೂರಾತಿ ನೀಡಿ ನೇಮಕಾತಿ ಮಾಡಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್‌. ಎ. ಗಫಾರ್‌. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಿ. ಚಿಕೇನಕೊಪ್ಪ. ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಸಾಧಿಕ ಅಲಿ ದಫೇದಾರ್ ಪೈಲ್ವಾನ್‌. ಮೌಲಾ ಹುಸೇನ ಹಣಗಿ. ದಲಿತ ಸಂಘಟನೆಯ ಹಿರಿಯ ನಾಯಕ ಆನಂದ ಭಂಡಾರಿ ಮುಂತಾದವರು ಒತ್ತಾಯಿಸಿದ್ದಾರೆ.