ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವು: ರಾಜುಕುನ್ನೂರ

ಲೋಕದರ್ಶನ ವರದಿ

ಶಿಗ್ಗಾವಿ 31:  ವೈಯಕ್ತಿಕ ಓರೇಕೊರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆನೆರವಾಗುತ್ತದೆ. ದೈಹಿಕ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತನ್ಮೂಲಕಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆಎಂದು ಶ್ರೀ ಚನ್ನಪ್ಪಕುನ್ನೂರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜು ಎಂ. ಕುನ್ನೂರ ಹೇಳಿದರು.

ಪಟ್ಟಣದ ಶ್ರೀ ಚನ್ನಪ್ಪಕುನ್ನೂರ ಕಾಲೇಜಿನಲ್ಲಿ ನಡೆದ ಶಿಗ್ಗಾವಿ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲಅದು ಗೆಲುವಿನ ಸೋಪಾನ ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದ ಅವರು ವಿದ್ಯಾರ್ಥಿಗಳು ಮೊಬೈಲ್ ಗೇಮ್ಗಳ ಗೀಳಿನಿಂದ ಹೊರಬರಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಂಭಾಪುರಿ ಕಾಲೇಜಿನ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ ಅವರು ಕ್ರೀಡೆಗಳು ದೇಶದೇಶಗಳ ನಡುವಿನ ಯುದ್ದಗಳನ್ನು ತಪ್ಪಿಸಿ ಶಾಂತಿ ಸಂದೇಶಗಳನ್ನು ಸಾರುವ ಶಕ್ತಿ ಹೊಂದಿವೆ. ಪರಸ್ಪರ ಸೌಹಾರ್ಧ ಭಾವನೆಯನ್ನು ಮೂಡಿಸುವುದು ಕ್ರೀಡೆಯ ಉದ್ದೇಶ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದಅಧ್ಯಕ್ಷಎಸ್. ಎಸ್. ನಿಸ್ಸೀಮಗೌಡರ, ಕಾರ್ಯದರ್ಶಿ ಪ್ರಕಾಶ ಬಾರಕೇರ ಪ್ರಾಚಾರ್ಯ ಡಾ.ಸುಜಾತಾ ಅಕ್ಕಿ, ಗುರುಮೂರ್ತಿ, ಕಾರಗಿ, ಶಿವು ಹುಬ್ಬಳ್ಳಿ, ಸಿಸ್ಟರ್ ಅಗ್ನೇಶ ಅನಿಥಾ ಇನ್ನಿತರರು ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಮಹೇಶ ಲಕ್ಷ್ಮೇಶ್ವರ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಕೆ.ಎಸ್. ಬರದೇಲಿ ವಂದಿಸಿದರು, ಕೆ. ಬಸಣ್ಣ ಕಾರ್ಯಕ್ರಮ ನಿರೂಪಿಸಿದರು.