ನಿರಂತರ ಯೋಗಾಭ್ಯಾಸ ಮಾಡಿ ಸದೃಢರಾಗಿ: ವಿಜಯ ರವದಿ
ಹುಕ್ಕೇರಿ 28: ಹೊರವಲಯದ ವಿಜಯ ರವದಿ ಫಾರ್ಮ್ ಹೌಸ್ ನಲ್ಲಿ ಪತಂಜಲಿ ಯೋಗ ಸಮಿತಿ ಹುಕ್ಕೇರಿ ಹಾಗೂ ವಿಜಯ ರವದಿ ಸಮಾಜ ಸೇವಾ ಸಂಸ್ಥೆ ಹಾಗೂ ರೈತ ಹಿತರಕ್ಷಣಾ ವೇದಿಕೆ ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಯೋಗ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ಜರುಗಿತು.
ವೇದಿಕೆ ಮೇಲೆ ಪಿ ಜಿ ಕೊಣ್ಣೂರ, ಶಿವಾನಂದ ಝಿರ್ಲಿ ಉಮಾ ಸೊಲ್ಲಾಪುರೆ, ಸಂಜು ಮುತಾಲಿಕ ಬಸವರಾಜ್ ಕುಂಬಾರ್, ರಾಜು ಬಾಗಲಕೋಟಿ ಉಪಸ್ಥಿತರಿದ್ದರು. ಯೋಗ ಗುರುಗಳಾದ ಕುಮಾರ್ ಬಡಿಗೇರ್ ಸ್ವಾಗತಿಸಿದರೆ, ಚಂದ್ರಶೇಖರ್ ಗಂಗನ್ನವರ ಪ್ರಾಸ್ತವಿಕವಾಗಿ ಮಾತನಾಡಿ ಗಣ್ಯರಿಗೆ ಪುಷ್ಪ ನೀಡಿ ಗೌರವಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಯೋಗ ಶಿಬಿರಾರ್ಥಿ ಉಷಾ ರವದಿ ಮನಸ್ಸು ಮತ್ತು ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಲು ಯೋಗದಿಂದ ಮಾತ್ರ ಸಾಧ್ಯ ಕಾರಣ ಹುಕ್ಕೇರಿ ಮತ್ತು ಸುತ್ತಮುತ್ತಲಿನ ಮಹಿಳೆಯರು ಯೋಗ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಬೇಕು ಎಂದರು.ಯೋಗ ಶಿಬಿರದ ರೂವಾರಿ ವಿಜಯ ರವದಿ ಮಾತನಾಡಿ ಕಳೆದ ಒಂದು ವರ್ಷದ ಹಿಂದೆ ಕೇವಲ 15 ದಿನ ಯೋಗ ಶಿಬಿರ ಮಾಡಲು ತಿರ್ಮಾನಿಸಲಾಗಿತ್ತು ಆದರೆ ಶಿಬಿರಾರ್ಥಿಗಳ ಒತ್ತಾಯದ ಮೇಲೆ ನಿರಂತರ ಶಿಬಿರ ಹಮ್ಮಿಕೊಳ್ಳಲಾಗಿದೆ ಕಾರಣ ಹುಕ್ಕೇರಿ ನಗರದ ಮತ್ತು ಸುತ್ತಮುತ್ತಲಿನ ಪುರುಷರು ಮತ್ತು ಮಹಿಳೆಯರು ಪ್ರತಿ ದಿನ ಶಿಬಿರದಲ್ಲಿ ಪಾಲ್ಗೊಂಡು ಸದೃಢ ಹುಕ್ಕೇರಿ ಮಾಡಲು ಸಹಕರಿಸಬೇಕು ಎಂದರು.ಅನ್ನಪೂರ್ಣ, ಉಮಾ ದಡ್ಡಿಮನಿ, ಕುಂಬಾರ್, ಸಂದೀಪ್ ಸೂರ್ಯವಂಶಿ, ಮಹಾದೇವ ದಡ್ಡಿಮನಿ ಅನೇಕ ಶಿಬಿರಾರ್ಥಿಗಳು ಯೋಗದ ಕುರಿತು ಅನುಭವಗಳನ್ನು ಹಂಚಿಕೊಂಡರು. ಯೋಗ ಗುರುಗಳಾದ ಬಿ ಎನ್ ಕೊಳೆಕರ್, ಸುನೀಲ್ ಬೊಂಗಾಳೆ ರಾಜು ಗಸ್ತಿ, ಜ್ಯೋತಿ ಸೊಲ್ಲಾಪುರೆ, ಅರುಣಾ ಇಂಗಳೆ, ರತ್ನಾ ಗಸ್ತಿ ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಹಿಳೆಯರಿಂದ ಯೋಗಾಭ್ಯಾಸ ಜರುಗಿತು.