ಮುಂದಗೋಡ

ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ನಾಲ್ಕನೇ ವರ್ಷದ ಪುಣ್ಯೆ ಸ್ಮರಣೆ

ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ನಾಲ್ಕನೇ ವರ್ಷದ ಪುಣ್ಯೆ ಸ್ಮರಣೆ

ಮುಂಡಗೋಡ 29: ಕನ್ನಡ ಚಿತ್ರರಂಗದ ಪವರಸ್ಟಾರ್ ಪುನೀತ್ ರಾಜ್‌ಕುಮಾರ್, ಕನ್ನಡಿಗರ ಪಾಲಿನ ಆರಾಧ್ಯ ದೈವ. ಅಪ್ಪು ನಿಧನರಾಗಿ ನಾಲ್ಕು ವರ್ಷಗಳು ಕಳೆದಿದೆ.  

ಕರ್ನಾಟಕ ರತ್ನ ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ನಾಲ್ಕುನೇ ವರ್ಷದ ಪುಣ್ಯಸ್ಮರಣೆ ನಡೆಯಲಿದೆ. ಕರ್ನಾಟಕ ರತ್ನ ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಾಲ್ಕುನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಮುಂಡಗೋಡ ಬಸ್ ನಿಲ್ದಾಣದ ಆಟೋ ಚಾಲಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕರ್ನಾಟಕ ರತ್ನ ಪವರಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್‌.ಎಮ್‌.ನಾಯ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜ್ಞಾನೇಶ್ವರ ಗುಡಿಯಾಳ, ಪ್ರಮುಖರಾದ ಸಿದ್ಧಪ್ಪ ಹಡಪದ, ಕೆ.ಸಿ.ಗಲಭಿ ಶೇಖರ್ ಲಮಾಣಿ, ಶಿವರಾಜ್ ಸುಬ್ಬರಾಯ ರಜಾ ಖಾನ್ ಪಠಾಣ್, ಮಹಮ್ಮದ್ ಗೌಸ್, ಫಣಿರಾಜ ಹದಲಗಿ ಪ.ಪಂ ಸದಸ್ಯರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು, ಆಟೋ ಚಾಲಕರು ಸಾರ್ವಜನಿಕರು ಹಾಗೂ ಉಪಸ್ಥಿತರಿದ್ದರು. 


ಸುದ್ದಿ ಓದಿ