ಇರಾನ್‌ನಲ್ಲಿ ಪ್ರಬಲ ಭೂಕಂಪ: 6ರಷ್ಟು ತೀವ್ರತೆ ದಾಖಲು
ಟೆಹ್ರಾನ್: ಮಾರ್ಚ್ 17 : ಇರಾನ್‌ನಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6 ಎಂದು ಅಳೆಯಲಾಗಿದೆ. ಈ ಮಧ್ಯೆ ನಿನ್ನೆ ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪವಾಗಿ ಬುಲೆಟ್ ರೈಲು ಕೂಡ ಹಳಿತಪ್ಪಿತ್ತು. ಭೂಕಂಪದಿಂದಾಗಿ ಜಪಾನ್ ನಲ್ಲಿ 4 ಮಂದಿ ಸಾವನ್ನಪ್ಪಿದ್ದು, 90 ಮಂದಿ ಗಾಯಗೊಂಡಿದ್ದಾರೆ. ಇರಾನ್‌ನಲ್ಲಿ ಪ್ರಾಣ ಅಥವಾ ಆಸ್ತಿ ಹಾನಿಯಾಗಿರುವ ಬಗ್ಗೆ ಇನ್ನೂವರೆಗೆ ಯಾವುದೇ ಮಾಹಿತಿ ಬಂದಿಲ್ಲ.
ದಕ್ಷಿಣ ಇರಾನ್‌ನಲ್ಲಿ ಈ ಪ್ರಬಲ ಭೂಕಂಪನದ ಅನುಭವವಾಗಿದ್ದು, ಕಂಪನದ ಕೇಂದ್ರಬಿಂದು ಭೂಮಿಯಿಂದ 10 ಕಿ.ಮೀ ಆಳದಲ್ಲಿತ್ತು. ಇರಾನ್‌ನಲ್ಲಿ ಭೂಕಂಪದ ಮಾಹಿತಿಯನ್ನು ಜಿಎಫ್‌ಜೆಡ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ನೀಡಿದೆ.