ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಜಕಾರ್ತ: ಮೇ 27: ಇಂಡೋನೇಷ್ಯಾದ ಪೂರ್ವ ಮಾಲುಕು ಪ್ರಾಂತ್ಯದಲ್ಲಿ ಶುಕ್ರವಾರ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ಪ್ರಮಾಣವು 6.5 ರಷ್ಟಿತ್ತು ಎಂದು ಹವಾಮಾನ ಮತ್ತು ಜಿಯೋಫಿಸಿಕ್ಸ್ ಸಂಸ್ಥೆ ಈ ಮಾಹಿತಿಯನ್ನು ನೀಡಿದೆ. ಆದರೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಸ್ಥಳೀಯ ಕಾಲಮಾನ ಬೆಳಗ್ಗೆ 9:36ಕ್ಕೆ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆ ತಿಳಿಸಿದೆ. ಇದರ ಕೇಂದ್ರವು ಮಲುಕು ಬಾರತ್ ದಯಾ ಜಿಲ್ಲೆಯ ನೈಋತ್ಯಕ್ಕೆ 85 ಕಿಮೀ ಮತ್ತು ಸಮುದ್ರ ಮಟ್ಟದಿಂದ 104 ಕಿಮೀ ಕೆಳಗೆ ಇತ್ತು ಎಂದು ತಿಳಿಸಿದೆ.
ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.