ಹುಕ್ಕೇರಿ

ಜಾತ್ರೆ ಮುಂದೂಡಿದರೂ ನಿಲ್ಲದ ಧಾರ್ಮಿಕ ವಿಧಿ ವಿಧಾನ

ಜಾತ್ರೆ ಮುಂದೂಡಿದರೂ ನಿಲ್ಲದ ಧಾರ್ಮಿಕ ವಿಧಿ ವಿಧಾನ
ಹುಕ್ಕೇರಿ ನಗರದ ಲಕ್ಷ್ಮೀ ಹಾಗೂ ದ್ಯಾಮವ್ವಾ ಗುಡಿಯಲ್ಲಿ ಮಹಿಳೆಯರು ದೇವಿಗೆ ಉಡಿ ತುಂಬಿದರು.

ಹುಕ್ಕೇರಿ 9: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶ್ರೀಲಕ್ಷೀ (ದ್ಯಾಮವ್ವಾ) ಜಾತ್ರೆ ಅತೀ ದೊಡ್ಡ ಜಾತ್ರೆ ಎಲ್ಲರೂ ತಮ್ಮ ಸಂಭಂಧಿಕರೊಂದಿಗೆ ಬೆರೆತು ಅದ್ದೂರಿಯಾಗಿ ಜಾತ್ರೆಯನ್ನು ಆಚರಿಸುತ್ತಾರೆ ಆದರೆ ಈ ವರ್ಷ ಮಹಾಮಾರಿ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ಬಹುತೇಕ ದೊಡ್ಡ ಜಾತ್ರೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಹೀಗಾಗಿ ಜಾತ್ರೆಗಳಲ್ಲಿ ಆಗುವ ಲಕ್ಷಾಂತರ ರೂಪಾಯಿಗಳ ವ್ಯವಹಾರಕ್ಕೆ ಕೊಡಲಿ ಏಟು ಬಿದ್ದಂತಾಗಿದೆ.

ಹುಕ್ಕೇರಿ ಗ್ರಾಮ ದೇವತೆ ಶ್ರೀಲಕ್ಷೀ (ದ್ಯಾಮವ್ವಾ) ತೈವಾರ್ಷಿಕ ಜಾತ್ರಾ ಮಹೋತ್ಸವವನ್ನು ಈ ವರ್ಷ ಎಪ್ರೀಲ್ 6 ರಿಂದ 10 ರ ವರೆಗೆ ಆಚರಿಸಲು ನಿಗದಿ ಪಡಿಸಲಾಗಿತ್ತು ಜಾತ್ರೆಯಲ್ಲಿ ಲಕ್ಷಾಂತರ ಜನ ಕೂಡುವ ಸಾಧ್ಯತೆ ಇದ್ದುದ್ದರಿಂದ ಹಾಗೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಅವರು ಕೊನೆಯ ಕ್ಷಣದಲ್ಲಿ ಜಾತ್ರೆಯನ್ನು ರದ್ದುಪಡಿಸಿದ ಬಗ್ಗೆ ಆದೇಶ ಹೊರಡಿಸಿದ್ದರಿಂದ ಸಾಲ ಮಾಡಿ ಜಾತ್ರೆಯ ಪೂರ್ಣ ಸಿದ್ದತೆ ಮಾಡಿಕೊಂಡ ಜನರಿಗೆ ನಿರಾಸೆ ಉಂಟಾಗಿ ಅವರ ಆಶೆಗೆ ತಣ್ಣೀರು ಎರಚಿದಂತಾಯಿತು. ಜಾತ್ರಾ ಕಮೀಟಿ ಹಾಗೂ ಹಕ್ಕುದಾರರು ಜನರ ಹಿತÀ ದೃಷ್ಟಿಯಿಂದ ಜಾತ್ರೆಯನ್ನು 2 ವರ್ಷ ಮುಂದೂಡಿದರು.

ದೇವಿಯನ್ನು ಬಣ್ಣಕ್ಕೆ ನೀಡಿದ್ದರಿಂದ ಗುಡಿಯಲ್ಲಿ ದೇವಿ ಮೂರ್ತಿ ಇಲ್ಲ ಬದಲಾಗಿ ಬೆಳ್ಳಿಯ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ನಿಗದಿಪಡಿಸಿದ ಜಾತ್ರೆ ಸಮಯದಲ್ಲಿ ಮಂಗಳವಾರ ಹಾಗೂ ಶುಕ್ರವಾರದಂದು ಜನರು  ಪರಂಪರೆಯಂತೆ ದಂಡವತ ಹಾಕಿ ಹಾಗೂ ಮಹಿಳೆಯರು ದೇವಿಗೆ ನೈವೇದ್ಯ ಅರ್ಪಿಸಿ ಉಡಿ ತುಂಬಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿಕೊಂಡರು ದೇವಿಯ ಹೊನ್ನಾಟ ಹಾಗೂ ರಥೋತ್ಸವ ಇಲ್ಲದಿದ್ದರೂ ಜಾತ್ರೆಯ ವಿಧಿ ವಿಧಾನಗಳನ್ನು ಭಕ್ತಿ ಭಾವದಿಂದ ನೆರವೇರಿಸಿ ಜಾತ್ರೆಯನ್ನು ಆಚರಿಸಿದರು. ನಗರದ ಮಹಾಲಕ್ಷೀ ಹಾಗೂ ದ್ಯಾಮವ್ವಾ ಮಂದಿರದಲ್ಲಿ ನೂರಾರು ಪುರುಷ ಮಹಿಳೆಯರು ನೇರೆದಿದ್ದರಿಂದ ಜಾತ್ರೆ ವಿಶೇಷ ಮೆರಗು ಬಂದತಾಗಿತ್ತು. ಆದರೆ ಯಾರೂ ಮಾಸ್ಕ ಧರಿಸದೆ ಸಮಾನ ಅಂತರÀವಿಲ್ಲದೆ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಯನ್ನು ಗಾಳಿಗೆ ತೂರಿದ್ದು ಮಾತ್ರ ಎದ್ದು ಕಾಣುತಿತ್ತು. ಎಲ್ಲಾ ಮನೆಗಳಲ್ಲಿ ಇಂದು ಶುಕ್ರವಾರ ಹೋಳಿಗೆ ಊಟ. ನೆರೆ ರಾಜ್ಯಗಳಲ್ಲಿ ವಿವಾಹ ಮಾಡಿಕೊಂಡ ಮಹಿಳೆಯರು ತಮ್ಮ ತವರು ಮನೆಗಳಿಗೆ ಬಂದು ದೇವಿಗೆ ನೈವೇದ್ಯ ಅರ್ಪಿಸಿದರು. ದೇವಿಯನ್ನು ಯುಗಾದಿ ಹಬ್ಬದಂದು ಪ್ರತಿಷ್ಟಾಪನೆ ಮಾಡಿ ವಿಶೇಷ ಪೊಜೆ ಸಲ್ಲಿಸಲಾಗುವುದು. ನಂತರ 2023 ರಂದು ಮುಂದೂಡಲಾದ ಜಾತ್ರೆಯನ್ನು ಆಚರಿಸಲಾಗುವುದು.

ಸುದ್ದಿ ಓದಿ