ಕ್ರೀಡೆ

“ರಾಷ್ಟ್ರೀಯ ಚೆಸ್ ಪಂದ್ಯಾವಳಿ ಅಂಡರ್-7” ಮುಂದೂಡಿಕೆ

“ರಾಷ್ಟ್ರೀಯ ಚೆಸ್ ಪಂದ್ಯಾವಳಿ ಅಂಡರ್-7” ಮುಂದೂಡಿಕೆ

ಚೆನ್ನೈ: ಜುಲೈ 23 :ಆಗಸ್ಟ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆಯಬೇಕಿದ್ದ 7 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಪಂದ್ಯಾವಳಿಯನ್ನು ಅಕ್ಟೋಬರ್‌ ವರಗೆ ಮುಂದೂಡಲಾಗಿದೆ. ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ಭಾನುವಾರ ಈ ಕುರಿತು ಘೋಷಣೆ ಮಾಡಿದೆ.

ಏಷ್ಯನ್ ಚೆಸ್ ಫೆಡರೇಶನ್ ಆಗಸ್ಟ್ 25 ರಿಂದ ಸೆಪ್ಟೆಂಬರ್ 3 ರವರೆಗೆ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ 2022 ಅನ್ನು ಆಯೋಜಿಸಲು ಎಐಸಿಎಫ್ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಐಸಿಎಫ್ ಚೆನ್ನೈನಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಅಖಿಲ ಭಾರತ ಚೆಸ್ ಫೆಡರೇಶನ್ ಅಗಸ್ಟ್ 23-28ವರೆಗೆ ಉದಯಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಅಂಡರ್-7 ಪಂದ್ಯಾವಳಿಯನ್ನು ಮುಂದೂಡಿಲಾಗಿದೆ. ಈಗ ಈವೆಂಟ್ ಅನ್ನು ಗುಜರಾತ್‌ನಲ್ಲಿ ಅಕ್ಟೋಬರ್‌ 6ರಿಂದ 11 ಅಕ್ಟೋಬರ್ ವರೆಗೆ ನಡೆಯಲಿದೆ. ನಿಖರವಾದ ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ” ಎಂದು ಹೇಳಿದೆ.

ಸುದ್ದಿ ಓದಿ