ಅಂತರರಾಷ್ಟ್ರೀಯ

ಬೇರೆ ದೇಶಗಳಿಗೆ ಅಮೆರಿಕ ಕೊರೊನಾ ಲಸಿಕೆ ಪೂರೈಸುವ ಸಾಧ್ಯತೆ: ಟ್ರಂಪ್

ಬೇರೆ ದೇಶಗಳಿಗೆ ಅಮೆರಿಕ ಕೊರೊನಾ ಲಸಿಕೆ ಪೂರೈಸುವ ಸಾಧ್ಯತೆ: ಟ್ರಂಪ್

ವಾಶಿಂಗ್ಟನ್, ಜುಲೈ 29: ಕೊರೊನಾ ವೈರಸ್ ಲಸಿಕೆ ಸಿದ್ಧವಾದಾಗ, ಇತರ ದೇಶಗಳಿಗೆ ಪೂರೈಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

  "ಕೊರೊನಾ ಲಸಿಕೆ ಸಿದ್ಧವಾದಾಗ, ನಾವು ಅದನ್ನು ವೆಂಟಿಲೇಟರ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಿದಂತೆ ವಿಶ್ವದ ಇತರ ದೇಶಗಳಿಗೆ ಪೂರೈಸುತ್ತೇವೆ" ಎಂದು ಟ್ರಂಪ್ ಹೇಳಿದರು.

  ವರದಿಯ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಥವಾ 2021 ರ ಆರಂಭದಲ್ಲಿ ಕೊರೊನಾ ಲಸಿಕೆ ಸಿದ್ಧವಾಗುತ್ತದೆ ಎಂದು ಟ್ರಂಪ್ ಆಡಳಿತ ಆಶಿಸಿದೆ. ಜೈವಿಕ ತಂತ್ರಜ್ಞಾನ ಕಂಪನಿ ಮಾಡರ್ನ್ ಅಭಿವೃದ್ಧಿಪಡಿಸಿದ ಸಂಭಾವ್ಯ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಅಮೆರಿಕ ವಿಜ್ಞಾನಿಗಳು ಪ್ರಾರಂಭಿಸಿದ್ದಾರೆ ಎಂದು ಸೋಮವಾರ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಹೆಚ್) ಹೇಳಿದೆ.

  ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಅಮೆರಿಕದಲ್ಲಿ ಇದುವರೆಗೆ 43 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 1,49,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

  


ಸುದ್ದಿ ಓದಿ