ಬೆಳೆಗಳ ‘ಕಣ್ಣು’ ಕಾವಲಿಗೆ ಪೋರ್ನ್ ಸುಂದರಿ ಫೋಟೊ
Porn beauty photo to guard crops
ಹೈದರಾಬಾದ್: ತಮ್ಮ ಬೆಳೆಗಳ ಮೇಲೆ ‘ಕೆಟ್ಟ ದೃಷ್ಟಿ’ ಬೀಳದಿರುವಂತೆ ನೋಡಿಕೊಳ್ಳಲು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ರೈತರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದು, ಬಾಲಿವುಡ್ ನಟಿ ಸನ್ನಿ ನಿಯೋನ್ ಪೋಸ್ಟರ್ ಅನ್ನು ಹೊಲಗಳಲ್ಲಿ ಅಂಟಿಸಿದ್ದಾರೆ.
ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ಮತ್ತು ಆಂಧ್ರ್ರದೇಶದ ಬಂದ ಕಿಂಡಿ ಪಲ್ಲೆ ಗ್ರಾಮದ ಹೊಲಗಳಲ್ಲಿ ಈ ರೀತಿಯ ಪೋಸ್ಟರ್ಗಳನ್ನು ಕಾಣಬಹುದಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಸುದ್ದಿಸಂಸ್ಥೆ ‘ಟೈಮ್ಸ್ ಇಂಡಿಯಾ’ಕ್ಕೆ ಪ್ರತಿಕ್ರಿಯಿಸಿರುವ ಆಂಧ್ರ್ರದೇಶದ ರೈತ ಚೆಂಚು ರೆಡ್ಡಿ, ಈ ಬಾರಿ ಉತ್ತಮ ಫಸಲು ಸಿಕ್ಕಿದೆ. ಫಸಲಿನ ಮೇಲೆ ಗ್ರಾಮಸ್ಥರು ಮತ್ತು ದಾರಿಹೋಕರ ದೃಷ್ಟಿ ಬೀಳದಂತೆ ತಡೆಯಲು ಪೋಸ್ಟರ್ ಅಂಟಿಸಲಾಗಿದೆ ’ ಎಂದಿದ್ದಾರೆ.
ಚೆಂಚು ರೆಡ್ಡಿ ಅವರು ತಮ್ಮ 10 ಎಕರೆ ಹೊಲದಲ್ಲಿ ಎಲೆಕೋಸು ಮತ್ತು ಹೂಕೋಸು ಬೆಳೆದಿದ್ದಾರೆ.
ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ರೈತ ಮಾತನಾಡಿ, ‘ಸನ್ನಿ ಲಿಯೋನ್ ಫೋಟೊ ಹಾಕಿದ್ದರಿಂದ ದಾರಿಹೋಕರ ಗಮನ ಫಸಲಿನ ಬದಲು ಪೋಸ್ಟರ್ ಕಡೆಗೆ ಹೆಚ್ಚು ಹೋಗುತ್ತದೆ’ ಎಂದು ಹೇಳಿದ್ದಾರೆ. ಅವರ ಹತ್ತಿ ಹೊಲದಲ್ಲಿ ಸನ್ನಿ ಲಿಯೋನ್ ಅವರ ದೊಡ್ಡ ಪೋಸ್ಟರ್ ರಾರಾಜಿಸುತ್ತಿದೆ.
ತಲೆಮಾರುಗಳಿಂದ ಕೆಟ್ಟ ದೃಷ್ಟಿಯ ಬಗ್ಗೆ ಜನರು ನಂಬಿಕೆಯಿಟ್ಟುಕೊಂಡು ಬಂದಿದ್ದು, ತಮ್ಮ ಆಸ್ತಿ ಮತ್ತು ಹೊಲಗಳನ್ನು ರಕ್ಷಿಸಲು ಕಪ್ಪು ಬಟ್ಟೆ, ಬೆದರು ಗೊಂಬೆ, ದೇವರ ಚಿತ್ರಗಳನ್ನು ತೂಗು ಹಾಕುತ್ತಿದ್ದಾರೆ. ಇತ್ತೀಚೆಗೆ ದೊಡ್ಡ ಕಣ್ಣಿನ ಮಹಿಳೆಯ ಫೋಟೊಗಳು ಎಲ್ಲೆಡೆ ಕಾಣಸಿಗುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 