ಜೋ ಬೈಡನ್ ಗೆ ಚೀನಾ, ಪೋಪ್ ಅಭಿನಂದನೆ
ವಾಷಿಂಗ್ಟನ್, 14: ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳ ಬಗ್ಗೆ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಆಕ್ಷೇಪ ಮುಂದುವರಿಸಿದ್ದರೂ, ಜಾಗತಿಕ ನಾಯಕರು ಒಬ್ಬೊಬ್ಬರಾಗಿ ಜೋ ಬಿಡನ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಗುರುತಿಸುತ್ತಿವೆ.
ಈಗ ಹೊಸದಾಗಿ ಚೈನಾ ಹಾಗೂ ವ್ಯಾಟಿಕನ್ ಸಿಟಿ ಬೈಡನ್ ಗೆಲುವಿಗಾಗಿ ಅಭಿನಂದನೆ ತಿಳಿಸಿದೆ.
ಡೆಮೋಕ್ರಾಟ್ ನಾಯಕನಿಗೆ ಪೋಪ್ ಫ್ರಾನ್ಸಿಸ್ ತಮ್ಮ ಆಶೀರ್ವಾದ ತಿಳಿಸಿದ್ದಾರೆ. ಜಾನ್ ಎಫ್. ಕೆನಡಿಯ ನಂತರ ಅಮೆರಿಕಾ ಅಧ್ಯಕ್ಷರಾಗುತ್ತಿರುವ ಎರಡನೇ ರೋಮನ್ ಕ್ಯಾಥೊಲಿಕ್ ಬೈಡೆನ್. ಅಮೆರಿಕಾದಲ್ಲಿರುವ ಕೆಲ ಕ್ಯಾಥೊಲಿಕ್ ಬಿಷಪ್‌ಗಳು ಅವರ ವಿಜಯವನ್ನು ಮಾನ್ಯ ಮಾಡಲು ನಿರಾಕರಿಸುತ್ತಿರುವ ಸಂದರ್ಭದಲ್ಲಿ ಪೋಪ್ ಬೈಡೆನ್ ಅವರನ್ನು ಅಭಿನಂದಿಸಿದ್ದಾರೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರನ್ನು ಚೀನಾ ಅಭಿನಂದಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೈನ್ಬೀನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಮೆರಿಕಾ "ಜನರ ತೀರ್ಪನ್ನು ಚೈನಾ ಗೌರವಿಸುತ್ತದೆ ಎಂದು ಹೇಳಿದ್ದಾರೆ.