ತಂದೆಯ ಸಂರಕ್ಷಣೆಯಿಂದ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಮುಕ್ತ
ವಾಷಿಂಗ್ಟನ್, ನ 13: - ಲಾಸ್ ಏಂಜಲೀಸ್ ಕೌಂಟಿಯ ಉನ್ನತ ಕೋರ್ಟ್ ನ್ಯಾಯಾಧೀಶೆ ಬ್ರೆಂಡಾ ಪೆನ್ನಿ ಸುಪ್ರಸಿದ್ದ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್‌ರನ್ನು ಆಕೆಯ ತಂದೆ ಜೇಮ್ಸ್ ಸ್ಪಿಯರ್ಸ್ ಅವರ ಸಂರಕ್ಷಣಾ ಅಧಿಕಾರದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ನ್ಯಾಯಾಧೀಶೆ ಪೆನ್ನಿ, ಬ್ರಿಟ್ನಿಯ ತಂದೆ ಜೇಮ್ಸ್ ಸ್ಪಿಯರ್ಸ್ ಅವರ 13 ವರ್ಷಗಳ ಸಂರಕ್ಷಣಾ ಅಧಿಕಾರವನ್ನು ಅಂತ್ಯಗೊಳಿಸಿದರು, ಇದು ತಕ್ಷಣವೇ ಜಾರಿಗೆ ಬರಲಿದ್ದು, ವೃತ್ತಿಪರ, ಸಾಮಾಜಿಕ ಹಾಗೂ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಬ್ರಟ್ನಿ ಅವರಿಗೆ ಅವಕಾಶ ಮಾಡಿಕೊಟ್ಟಿದೆ.
2008 ರಲ್ಲಿ, ಜೇಮ್ಸ್ ಅವರನ್ನು ಬ್ರಿಟ್ನಿ ಎಸ್ಟೇಟ್‌ನ ತಾತ್ಕಾಲಿಕ ಸಂರಕ್ಷಣಾಧಿಕಾರಿ ಎಂದು ಘೋಷಿಸಲಾಯಿತು, ನಂತರ ಅದನ್ನು ನಿರಂತರ ಎಂದು ಪರಿವರ್ತಿಸಲಾಗಿತ್ತು. ಜೂನ್ 2021 ರಲ್ಲಿ ಬ್ರಿಟ್ನಿ ಸಂರಕ್ಷಣಾ ಆವಧಿ ಕೊನೆಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಆಗಸ್ಟ್‌ನಲ್ಲಿ, ಬ್ರಿಟ್ನಿಯ ಸಂರಕ್ಷಣಾಧಿಕಾರಿ ಸ್ಥಾನ ತ್ಯಜಿಸಲು ಒಪ್ಪಿಕೊಳ್ಳುವುದಾಗಿ, ಹೊಸ ಬದಲಾವಣೆಗೆ ಸಿದ್ದಗೊಳ್ಳಲು ಸಹಾಯ ಮಾಡುವುದಾಗಿ ಜೇಮ್ಸ್ ಹೇಳಿದ್ದರು. ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ಕನ್ಸರ್ವೇಟರ್‌ಶಿಪ್ ಅನ್ನು ಔಪಚಾರಿಕವಾಗಿ ಅಮಾನತುಗೊಳಿಸಿತು.
21 ನೇ ಶತಮಾನದ ಆರಂಭದಲ್ಲಿ ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿದ್ದ ಬ್ರಿಟ್ನಿ ಸ್ಪಿಯರ್ಸ್, 2000ದ ಅಂತ್ಯದಲ್ಲಿ ವಿವಾಹ ವಿಚ್ಛೇದನ ನಂತರ ಮಾನಸಿಕ ಸಮಸ್ಯೆಗಳ ಜೊತೆಗೆ ಮಾದಕ ವ್ಯಸನ, ಮದ್ಯದ ಚಟಗಳನ್ನು ಬ್ರಿಟ್ನಿ ಎದುರಿಸಿದ್ದರು.