ಹೂವಿನಮರಡಿ ಗ್ರಾಮ: ಚಿರತೆ ಹಾವಳಿ, ಕುರಿಗಳ ಸಾವು
ಲೋಕದರ್ಶನವರದಿ
ರಾಣೇಬೆನ್ನೂರು09: ತಾಲೂಕಿನ ಹುಲಿಕಟ್ಟಿ ಗ್ರಾಮವೂ ಸೇರಿದಂತೆ ಬಹುತೇಕ ಗ್ರಾಮಾಂತರ ಪ್ರದೇಶಗಳ ಜಮೀನುಗಳಲ್ಲಿ ಚಿರತೆಗಳು ಸಾಗಿ ಹೋಗುತ್ತಿರುವ ಪ್ರಕರಣಗಳು ವರದಿಯಾಗುತ್ತಲಿವೆ.
ಮೊನ್ನೆಯಷ್ಟೇ ಹುಲಿಕಟ್ಟಿ ಬಳಿಯ ಹೂವಿನಮರಡಿ ಗ್ರಾಮದ ಮನೆಯೊಂದರಲ್ಲಿ ಚಿರತೆಗಳು ಕುರಿಗಳ ಮೇಲೆ ದಾಳಿ ನಡೆಸಿ ರಕ್ತ ಕುಡಿದಿವೆ.
ಕಳೆದ 6ರಂದು ರವಿವಾರ ರಾತ್ರಿ 12ರಿಂದ 1 ರ ಅವಧಿಯಲ್ಲ ಈ ದಾಳಿ ನಡೆದಿದ್ದು, ಇದರಿಂದ ಹಾಲಪ್ಪ ಮಲ್ಲಪ್ಪ ಅರಳಿಕಟ್ಟಿ ಇವರಿಗೆ ಸಂಬಂಧಿಸಿದ ಟಗರುಗಳಾಗಿವೆ. ಚಿರತೆ ದಾಳಿಯಿಂದ ಸುಮಾರು 70 ಸಾವಿರ ರೂ.ಗಳ ಹಾನಿ ಸಂಭವಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯಕೀಯ ಅಧಿಕಾರಿಗಳು ತಪಾಸಣೆ ನಡೆಸಿ ಚಿರತೆಯಿಂದಾದ ದಾಳಿಯೆಂದು ಖಚಿತಪಡಿಸಿದ್ದಾರೆ.
ಪದೇ ಪದೇ ಈ ಭಾಗದಲ್ಲಿ ಚಿರತೆ ಹಾವಳಿ ಸಂಭವಿಸುತ್ತಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ, ರೈತರ ಮತ್ತು ಕುರಿಗಾಯಿಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 