ಕಳಪೆ ಕಾಮಗಾರಿ ಸಹಿಸೋದಿಲ್ಲ: ಚರಂತಿಮಠ
ಲೋಕದರ್ಶನವರದಿ
ಬಾಗಲಕೋಟ: ತಾಲೂಕಿನ ಮುಗಳೊಳ್ಳಿ ಗ್ರಾಮದಲ್ಲಿ ಶನಿವಾರ ಶಾಸಕ ಡಾ.ವೀರಣ್ಣ ಚರಂತಿಮಠ ಶಾಲಾ ಕೊಠಡಿ ಹಾಗೂ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 809 ಲಕ್ಷ.ರೂ.ಗಳ ವೆಚ್ಚದ ಕಿರಸೂರ, ಮುಗಳೊಳ್ಳಿ, ಕಡ್ಲಿಮಟ್ಟಿ ರೇಲ್ವೆ ನಿಲ್ದಾಣ, ಬೆಣ್ಣೂರ ಮುಖ್ಯ ರಸ್ತೆಯ ಕಿ.ಮೀ 4.65ರಿಂದ ಕಿ.ಮೀ 8.23 ಮತ್ತು ಕಿ.ಮೀ 10.03 ರಿಂದ ಕಿ.ಮೀ 17.30 ರವರೆಗಿನ ರಸ್ತೆ ಹಾಗೂ 66.47 ಲಕ್ಷ ರೂ.ಗಳ ವೆಚ್ಚದ ಮುಗಳೊಳ್ಳಿ ಪು.ಕೇದಿಂದ ಸಂಗೊಂದಿ ರಸ್ತೆಯ 2.20ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು.
ಕಳಪೆ ಕಾಮಗಾರಿ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ ಶಾಸಕರು, ಕಾಮಗಾರಿ ಪರಿಶೀಲಿಸಿ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಗಳೊಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಒಂದು ಕೊಠಡಿ ನಿಮರ್ಾಣದ 13.75 ಲಕ್ಷ ರೂ.ಗಳ ಕಾಮಗಾರಿಗೂ ಶಾಸಕ ಡಾ.ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.
ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜಶೇಖರ ಮುದೇನೂರ, ಕಾರ್ಯದಶರ್ಿ ಸುರೇಶ ಕೊಣ್ಣೂರ, ಬಿ.ಎಸ್.ಭಜನ್ನವರ, ಬಿ.ಜಿ.ತಳವಾರ, ಜಿಪಂ ಸಹಾಯಕ ಕಾರ್ಯನಿವರ್ಾಹಕ ಇಂಜನೀಯರ್ ವ್ಹಿ.ಎಸ್.ಕೊಟಗಿ, ಕಿರಿಯ ಅಭಿಯಂತರ ಜಿ.ಎಂ.ಪಾಟೀಲ, ಲೋಕೋಪಯೋಗಿ ಇಲಾಖೆಯ ಇಂಜನೀಯರುಗಳು, ಗುತ್ತಿಗೆದಾರರು ಮತ್ತಿತರರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 