ಬೆಳಗಾವಿಯಲ್ಲಿ ಮನೆಯೊಂದರ ಮೇಲೆ ಪೊಲೀಸರ ದಾಳಿ : ಪತ್ತೆಯಾಯ್ತು ಲಕ್ಷ ಲಕ್ಷ ಮೌಲ್ಯದ ಅಕ್ರಮ ಸಾರಾಯಿ

ಬೆಳಗಾವಿಯಲ್ಲಿ ಮನೆಯೊಂದರ ಮೇಲೆ ಪೊಲೀಸರ ದಾಳಿ : ಪತ್ತೆಯಾಯ್ತು ಲಕ್ಷ ಲಕ್ಷ ಮೌಲ್ಯದ ಅಕ್ರಮ  ಸಾರಾಯಿ

ಬೆಳಗಾವಿ : ಇಲ್ಲಿಯ ಸದಾಶಿವ ನಗರದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಿ. 15ರಂದು ರಾತ್ರಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಲಕ್ಷ ಲಕ್ಷ ಮೌಲ್ಯದ ಅಕ್ರಮ ಗೋವಾ ರಾಜ್ಯದ ಸಾರಾಯಿ ಪತ್ತೆಯಾಗಿದೆ. ಈ ಪ್ರಕರಣ ಓರ್ವ ಆರೋಪಿನನ್ನು ಬಂಧಿಸಲಾಗಿದ್ದು, ಇನ್ನೋರ್ವ ಫರಾರಿಯಾಗಿದ್ದಾನೆ. 

   ದಿ. 15ರಂದು ಬೆಳಗಾವಿ ಪೊಲೀಸರು ತಡರಾತ್ರಿ ಖಚಿತ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರದ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ಮುಲ್ಲಾ , ನೇತೃತ್ವದ ತಂಡ ಎಪಿಎಂಸಿ ಪೊಲೀಸ್ ಅಧಿಕಾರಿ ಸಿಬ್ಬಂದಿಯವರ ಸಹಕಾರದಿಂದ ಬೆಳಗಾವಿ ನಗರದ ಸದಾಶಿವ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ ಸುಮಾರು 5,37.500 ರೂ . ಮೌಲ್ಯದ ಗೋವಾ ರಾಜ್ಯದಿಂದ ತರಲಾದ ವಿವಿಧ ಕಂಪನಿಯ ಒಟ್ಟು 475 ಲೀಟರ್ ಗಳಷ್ಟು ಸಂಗ್ರಹಿಸಿಟ್ಟ ಅಕ್ರಮ ಸಾರಾಯಿ ಬಾಟಲುಗಳನ್ನು ಜಫ್ತು ಮಾಡಿಕೊಂಡಿದ್ದಾರೆ.

   ಈ ಅಕ್ರಮ ಸಾರಾಯಿ ಸಂಗ್ರಹ ಪ್ರಕರಣ ದಲ್ಲಿ ಭಾಗಿಯಾದ ಆರೋಪಿ ಹರೀಶ ರಮೇಶ ಭಸ್ಮೆ (35) (ಸಾ. ಶೆಟ್ಟಿಗಲ್ಲಿ ಬೆಳಗಾವಿ) ಈತನನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು , ಇನ್ನೋರ್ವ ಆರೋಪಿ ರಾಜೇಶ ಕೇಶವ ನಾಯಕ ಪರಾರಿಯಾಗಿದ್ದು, ಈತನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪೊಲೀಸ್ ಅಧಿಕಾರಿ ಗಳ ಈ ದಾಳಿಯನ್ನು ನಗರ ಪೊಲೀಸ ಆಯುಕ್ತ ಡಾ. ಬೋರಲಿಂಗಯ್ಯಾ, ಡಿಸಿಪಿಗಳಾದ ಶೇಖರ ಟಕ್ಕನವರ, ಹಾಗೂ ಸ್ನೇಹಾ ಪಿ.ವ್ಹಿ. ಇವರು ಈ ಪೋಲಿಸ್ ತಂಡವನ್ನು ಅಭಿನಂದಿಸಿದ್ದಾರೆ. 

ಸುದ್ದಿ ಓದಿ