ರಬಾಕಾವಿಬನಹಟ್ಟಿ

ಮರಗಳಿದ್ದರೆ ಮಾತ್ರ ನೆಮ್ಮದಿಯ ಬದುಕು : ಸಾಬೋಜಿ

ಮರಗಳಿದ್ದರೆ ಮಾತ್ರ ನೆಮ್ಮದಿಯ ಬದುಕು : ಸಾಬೋಜಿ

ರಬಕವಿ-ಬನಹಟ್ಟಿ 31: ಮರಗಳಿದ್ದರೆ ಮಾತ್ರ ನೆಮ್ಮದಿಯಿಂದ ಆರೋಗ್ಯ ದಿಂದ ಬದುಕಲು ಸಾಧ್ಯ ಎಂದು ರಬಕವಿ ಎಜ್ಯುಕೇಶನ್ ಸೊಸೈಟಿ ವ್ಹಾಯ್ಸ ಚೇರಮನ್ ಮಲ್ಲಿಕಾರ್ಜುನ ಸಾಬೋಜಿ ಹೇಳಿದರು. 

ಅವರು ರಬಕವಿಯ ಎಂ.ವ್ಹಿ.ಪಟ್ಟಣ ಪ್ರೌಢಶಾಲೆಯ ಇಕೋ ಕ್ಲಬ್ ಏರ್ಪಡಿಸಿದ್ದ ಸಸಿ ನೇಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯ ಮುಂದೆ ಕನಿಷ್ಟ ಒಂದೊಂದು ಮರ ಬೆಳೆಸಬೇಕು. ಇಂದು ನೆಟ್ಟ ಮರಗಳನ್ನು ಕಾಳಜಿಯಿಂದ ಪೋಷಿಸಬೇಕು. ಹಸಿರು ಇದ್ದರೆ ಮಾತ್ರ ಶುದ್ಧ ಉಸಿರು ಸಿಗಲು ಸಾಧ್ಯ ಇದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದು ಹೇಳಿದರು. ಇಕೋ ಕ್ಲಬ್ ಸಂಚಾಲಕ ಜಿ.ವ್ಹಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗಿಡಗಳು ನಾಶವಾದರೆ ಒಜೋನ ಪದರಕ್ಕೆ ರಂದ್ರ ಬೀಳುತ್ತದೆ.ಇದರಿಂದ ಬಿಸಿಲಿನ ತಾಪ ಹೆಚ್ಚಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಿ.ಎಮ್.ಮಟ್ಟಿಕಲ್ಲಿ, ಹಿರಿಯ ಸಹ ಶಿಕ್ಷಕ ಎಸ್.ಎಮ್.ತಳವಾರ, ಯಶವಂತ ವಾಜಂತ್ರಿ ಮಾತನಾಡಿದರು. ರವಿ ಬೆಲ್ಲಮ್ಮ, ಪ್ರಕಾಶ ಕೊಣ್ಣೂರ, ಎಂ.ಎ.ಪಾಯೆ. ಬಿ.ವಿ.ಅಮ್ಮಲಜೇರಿ ಉಪಸ್ಥಿತರಿದ್ದರು. ಬಿ.ಎಸ್.ಪಾಟೀಲ ವಂದಿಸಿದರು.

ಸುದ್ದಿ ಓದಿ