ಸಸಿ ನೆಟ್ಟು ಉತ್ತಮ ಪರಿಸರ ಹೊಂದಲು ಸಹಕರಿಸಿ: ಶಾಸಕ ಸವದಿ
ರಬಕವಿ-ಬನಹಟ್ಟಿ 28: ಸಸಿ ನೆಟ್ಟು ಪರಿಸರವನ್ನು ಬೆಳೆಸುವುದರಿಂದ ಉತ್ತಮವಾದ ವಾತಾವರಣ ನಿರ್ಮಾಣವಾಗುವುದಲ್ಲದೇ ಮಳೆಯು ಸಹ ಚನ್ನಾಗಿ ಆಗುವುದು. ಮನುಷ್ಯನಿಗೆ ಬೇಕಾದ ಆಮ್ಲಜನಕ ಹೆಚ್ಚಾಗಿ ಉತ್ಪನ್ನವಾಗುವುದರಿಂದ ಜನರು ಉತ್ತಮವಾದ ಆರೋಗ್ಯ ಹೊಂದಲು ಕಾರಣವಾಗುತ್ತದೆ. ಆದ್ದರಿಂದ ಪತ್ರಿಯೊಬ್ಬರು ಸಸಿ ನೆಟ್ಟು ಉತ್ತಮವಾದ ಪರಿಸರವನ್ನು ಹೊಂದಲು ಸಹಕರಿಸಬೇಕೆಂದು ತೇರದಾಳ ಕ್ಷೇತ್ರದ ಶಾಸಕ ಹಾಗೂ ಕೆ.ಎಚ್.ಡಿ.ಸಿ. ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ರಬಕವಿಯ ಬಸ್ ನಿಲ್ದಾಣ ಹತ್ತಿರ ಭಾರತೀಯ ಜನತಾ ಪಕ್ಷದ ರಬಕವಿ-ಬನಹಟ್ಟಿ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಟ್ಟು ಉದ್ಘಾಟಿಸಿ ಮಾತನಾಡಿದರು. ಕಳೆದ ಒಂದು ವಾರದಿಂದ ಕ್ಷೇತ್ರಾದ್ಯಂತ ವಿವಿಧ ಗಲ್ಲಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತೇರದಾಳ ಕ್ಷೇತ್ರಾದ್ಯಂತ ಸಸಿ ನೆಟ್ಟು ಉತ್ತಮವಾದ ಪರಿಸರವನ್ನು ಹೊಂದಿದ ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ. ಆದ್ದರಿಂದ ಪತ್ರಿಯೊಬ್ಬರು ತಮ್ಮ ತಮ್ಮ ಪ್ರದೇಶಗಳಲ್ಲಿ ಸಸಿ ನೆಟ್ಟು ಉತ್ತಮ ವಾತಾವರಣ ಹೊಂದಲು ಕಾರಣೀಭೂತರಾಗಬೇಕೆಂದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ, ನಗರಸಭಾ ಅಧ್ಯಕ್ಷ ಶ್ರೀಶೈಲ ಬೀಳಗಿ, ಕಾವೇರಿ ಹ್ಯಾಂಡ್ಲೂಮ ನಿರ್ದೇಶಕ ಆನಂದ ಕಂಪು, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಪರಶುರಾಮ ಕಾಖಂಡಕಿ, ಮಾರುತಿ ಗಾಡಿವಡ್ಡರ, ಯುವ ಮೋರ್ಚಾ ಅಧ್ಯಕ್ಷ ಶಂಕರ ಅಂಗಡಿ, ವಿನಾಯಕ ಶೇಗುಣಸಿ, ವಿಶಾಲ ಕದಮ, ಮಿಲನ ಚುನಮುರಿ, ಹರೀಶ ಕಾಗಲೆ, ಸಾಮಾಜಿಕ ಜಾಲತಾಣದ ಪದಾಧಿಕಾರಿಗಳಾದ ಶಿವು ಕೈಸಲಗಿ, ಸಚಿನ ಕಾಟಕರ, ಸಂಗಮೇಶ ಪರಮಶೆಟ್ಟಿ, ನಿಂಗರಾಜ ನಾಯಕ, ಆನಂದ ಪವಾಡಿ, ಜಡೇಶ ಘಂಟಿ, ಗಂಗಪ್ಪ ಬೆಕ್ಕೇರಿ, ಮಹಾದೇವ ಕೋಟ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.