ಮಾರ್ಚ 31ರೊಳಗೆ ಪೌರ ಕಾರ್ಮಿಕರ ನೇಮಕಾತಿಗೆ ಯೋಜನಾಧಿಕಾರಿ ಭರವಸೆ : ರಾಘವೇಂದ್ರ ಭರಮನ್ನವರ ಹೇಳಿಕೆ: ಜಿಲ್ಲಾ ಪೌರಕಾರ್ಮಿಕರ ಸಂಘದ ವಿವಿಧ ಶಾಖೆಗಳ ಸಭೆ
ಹುಕ್ಕೇರಿ 08: ನಗರದ ಪುರಸಭೆ ಕಛೇರಿಯಲ್ಲಿ ಬೆಳಗಾವಿ ಜಿಲ್ಲಾ ಪೌರಕಾರ್ಮಿಕರ ಜಿಲ್ಲಾಧ್ಯಕ್ಷ ರಾಘವೇಂದ್ರ ಭರಮ್ಮನ್ನವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಜಿಲ್ಲಾ ಪೌರಕಾರ್ಮಿಕರ ಸಂಘದ ವಿವಿಧ ಶಾಖೆಗಳ ಸಭೆ ಜರುಗಿತು.
ಜರುಗಿದ ಸಭೆಯಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಪೌರ ಕಾರ್ಮಿಕರ ಕೊರತೆ ಇದ್ದು ಈಗಾಗಲೇ ನ್ಯಾಯಾಲಯ ಆದೇಶದಂತೆ ಕೂಡಲೆ ನೇರ ನೇಮಕಾತಿ ಪಕ್ರಿಯೆ ಪ್ರಾರಂಭಿಸಿ ಮಾರ್ಚ 31 ರ ವಳಗಾಗಿ ಪೂರ್ಣಗೊಳಿಸಬೇಕು ಇಲ್ಲವಾದರೆ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ಸ್ಥಗಿತಗೊಳಿಸಲಾಗುವದು ಎಂದು ಬೆಳಗಾವಿ ಯೋಜನಾಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೆ ನೇಮಕಾತಿ ಪಕ್ರಿಯೆ ಆರಂಭಿಸಿದ ಹಿನ್ನಲೆಯಲ್ಲಿ ಇಂದು ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಜಿಲ್ಒ ಅಧಿಕಾರಿಗಳಿಗೆ ಮತ್ತು ಯೋಜನಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಪೌರಕಾರ್ಮಿಕರ ಜಿಲ್ಲಾಧ್ಯಕ್ಷ ರಾಘವೇಂದ್ರ ಭರಮನ್ನವರ 2018ರಲ್ಲಿ ಜಿಲ್ಕೆಯ ಸವದತ್ತಿ ಮತ್ತು ಅಥಣಿ ಪುರಸಭೆ ಪೌರ ಕಾರ್ಮಿಕರು ನ್ಯಾಯಾಲಯ ತಡೆ ತಂದಿದ್ದರಿಂದ ನೇಮಕಾತಿ ತಡೆ ಹಿಡಿಯಲಾಗಿತ್ತು. ಈಗ ಬೆಳಗಾವಿ ಯೋಜನಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಮನವರಿಕೆ ಮಾಡಿದ್ದರಿಂದ ಅಥಣಿ ಮತ್ತು ಸವದತ್ತಿ ಅಧಿಕಾರಿಗಳು ಕೇಸ್ ವಾಪಸ್ ಪಡೆದಿದ್ದಾರೆ ಈಗ ನ್ಯಾಯಾಲಯ ತಡೆ ತೆರವಾದ ಹಿನ್ನಲೆಯಲ್ಲಿ ಯೋಜನಾ ನಿರ್ದೆಶಕರು ಮಾರ್ಚ 31ರ ವಳಗಾಗಿ ಪೌರ ಕಾರ್ಮಿಕರ ನೇರ ನೇಮಕಾತಿಗೆ ಚಾಲನೆ ನೀಡಲು ಕ್ರಮ ಜರುಗಿಸಿದ್ದಾರೆ ಕಾರಣ ಜಿಲ್ಲೆಯ ಪೌರ ಕಾರ್ಮಿಕರು ಯಾವದೆ ಆತಂಕ ಪಡಬೇಕಾಗಿಲ್ಲಾ ಎಂದರು.
ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್ ಬಿ ಗುಡಕೇತರ ಮಾತನಾಡಿ ಮಾರ್ಚ 3 ರಂದು ಜಿಲ್ಲಾ ಮಟ್ಟದ ಪೌರ ಕಾರ್ಮಿಕರ ಸಭೆಯ ನಿರ್ಣಯ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಮತ್ತು ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಪೌರ ಕಾರ್ಮಿಕರ ನೇಮಕಾತಿ ಮಾಡಲು ಒಪ್ಪಗೆ ಸೂಚಿಸಿದ್ದಾರೆ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದರು.
ಜಿಲ್ಲಾ ನಾಮನಿರ್ದೆಶನ ಸದಸ್ಯ ಡಿ ಬಿ ನವಲೆ, ಶಾಖಾ ಅದ್ಯಕ್ಷ ಎಸ್ ಪಿ ಕರನಿಂಗ, ಕಾರ್ಯದರ್ಶಿ ಬಿ ಎ ಪಾಟೀಲ, ಖಜಾಂಚಿ ಎಸ್ ಎಸ್ ನಾಯಿಕ, ಉಪಾಧ್ಯಕ್ಷ ಎ ಜಿ ಮೋಕಾಶಿ, ಎಸ್ ಎಮ್ ಖಣವಿ ರಮೇಶ್ ಬಳ್ಳಾರಿ, ಪರಶುರಾಮ್ ಸೂರ್ಯವಂಶಿ, ಸತೀಶ್ ಅಪ್ಪಣ್ಣವರ, ಭಾರತಿ ಮಾತಿವಡೆ, ಸುಖದೇವ್ ಶಿಂಧೆ, ದುಂಡಪ್ಪ ರಂಗಣ್ಣವರ, ನಾಗರಾಜ್ ಬಳ್ಳಾರಿ, ಉಪಸ್ಥಿತರಿದ್ದರು.