ಅಂತರರಾಷ್ಟ್ರೀಯ

ಆಯೋಧ್ಯೆ ಮಾದರಿಯಲ್ಲಿ ನೇಪಾಳದಲ್ಲೂ ಶ್ರೀರಾಮ ಮಂದಿರ...!

ಆಯೋಧ್ಯೆ ಮಾದರಿಯಲ್ಲಿ  ನೇಪಾಳದಲ್ಲೂ ಶ್ರೀರಾಮ ಮಂದಿರ...!
ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಚಿತ್ರ

ಕಠ್ಮಂಡು, ಆಗಸ್ಟ್ ೯: ತಮ್ಮ ದೇಶದಲ್ಲೂ ಅದ್ಭುತವಾದ  ಶ್ರೀ ರಾಮ ಮಂದಿರ  ನಿರ್ಮಿಸಲಾಗುವುದು  ಎಂದು  ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಹೇಳಿದ್ದಾರೆ. ಶ್ರೀರಾಮನ ಜನ್ಮಸ್ಥಳ ನೇಪಾಳದಲ್ಲಿದೆ ಎಂದು ಅವರು ಈ ಹಿಂದೆ  ಹೇಳಿಕೆ  ನೀಡಿದ್ದರು.

ತಪ್ಪು ಮಾಹಿತಿ  ಆಧಾರದ ಮೇಲೆ  ಉತ್ತರ ಪ್ರದೇಶದ ಆಯೋಧ್ಯೆಯನ್ನು ಶ್ರೀರಾಮನ ಜನ್ಮಸ್ಥಳವೆಂದು ಭಾರತ  ಹೇಳುತ್ತಿದೆ ಎಂದು ಆರೋಪಿಸಿದ್ದರು. ಆದರೆ, ನೇಪಾಳ ಪ್ರಧಾನಿ  ಓಲಿ ಹೇಳಿಕೆ ವಿರುದ್ದ   ಭಾರತದಲ್ಲಿ  ವ್ಯಾಪಕ  ಆಕ್ರೋಶ ವ್ಯಕ್ತವಾಗಿತ್ತು. ರಾಜಕೀಯ ಪಕ್ಷಗಳು ಹಾಗೂ  ಜನಸಾಮಾನ್ಯರೂ ಕೂಡ  ನೇಪಾಳ ಪ್ರಧಾನಿ  ಹೇಳಿಕೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು.

ಪ್ರಧಾನಿ  ಓಲಿ  ಅವರ   ಸ್ವಂತ ಪಕ್ಷದ ನಾಯಕರೂ ಕೂಡ  ಅವರ  ಹೇಳಿಕೆಯನ್ನು  ವಿರೋಧಿಸಿದ್ದರು.  ಆದರೂ, ಪ್ರಧಾನಿ ಓಲಿ ಈ ವಿಷಯದಲ್ಲಿ   ಪಟ್ಟು ಹಿಡಿದು ವಾದಿಸುತ್ತಿದ್ದಾರೆ.  ಅಷ್ಟು ಮಾತ್ರವಲ್ಲದೆ ನೇಪಾಳದಲ್ಲಿ ಅದ್ಬುತವಾದ  ಶ್ರೀ ರಾಮ ಮಂದಿರ  ನಿರ್ಮಿಸಬೇಕೆಂದು   ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ದೇವಾಲಯ  ನಿರ್ಮಾಣಕ್ಕೆ  ಆರ್ಥಿಕವಾಗಿ  ಸಹಕಾರ  ನೀಡಲಾಗುವುದು  ಎಂದು  ನೇಪಾಳ ಸರ್ಕಾರದ ಪರವಾಗಿ ಭರವಸೆ ನೀಡಿದ್ದಾರೆ. ಆಯೋಧ್ಯಾಪುರಿಯ ಜತೆಗೆ ರಾಮಾಯಣಕ್ಕೆ ಸಂಬಂಧಿಸಿದ   ಸ್ಥಳಗಳನ್ನು  ಅಭಿವೃದ್ದಿಪಡಿಸಲಾಗುವುದು  ಎಂದು ಓಲಿ ಹೇಳಿದ್ದಾರೆ.

ಸುದ್ದಿ ಓದಿ