ಅಂತರರಾಷ್ಟ್ರೀಯ

ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ಜನ: ಪೋಲೆಂಡ್-ರಷ್ಯಾದಲ್ಲಿ ಆಶ್ರಯ

ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ಜನ: ಪೋಲೆಂಡ್-ರಷ್ಯಾದಲ್ಲಿ ಆಶ್ರಯ

ಕೀವ್: ಫೆಬ್ರವರಿ 20: ಪೂರ್ವ ಉಕ್ರೇನ್‌ನಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ನಿರಂತರ ಬಾಂಬ್ ದಾಳಿ ನಡೆಯುತ್ತಿದ್ದು, ಭಯಭೀತಗೊಂಡಿರುವ ಲಕ್ಷಾಂತರ ಜನ ಕಾಲ್ಕಿಳಿಯುತ್ತಿದ್ದಾರೆ. ಸಿಕ್ಕ ಸಿಕ್ಕ ಬಸ್ಸು, ರೈಲುಗಳನ್ನು ಹತ್ತುವ ಮೂಲಕ ಪೋಲೆಂಡ್ ಗಡಿಯತ್ತ ಸಾಗಲು ಪ್ರಾರಂಭಿಸಿದ್ದಾರೆ. ಈ ಸಂಖ್ಯೆ ಸುಮಾರು 3 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಇನ್ನೊಂದೆಡೆ ಪ್ರತ್ಯೇಕತಾವಾದಿಗಳ ದಾಳಿಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾ ಆಕ್ರಮಿತ ಪ್ರದೇಶದಲ್ಲಿ ವಾಸಿಸುವ ಸುಮಾರು ಏಳು ಲಕ್ಷ ಜನರು ಸಹ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಆಶ್ರಯ ನೀಡಲು ರಷ್ಯಾ ತನ್ನ ಗಡಿಯನ್ನು ತೆರೆದಿದೆ.

ಉಕ್ರೇನ್‌ನ ಈ ಎರಡು ಗಡಿ ಪ್ರದೇಶಗಳಲ್ಲಿ ವಾಸಿಸುವ ಒಟ್ಟು ಜನರ ಸಂಖ್ಯೆ ಸುಮಾರು 10 ಲಕ್ಷ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ತಾವು ಬಲಿಪಶುಗಳಾಗುತ್ತೇವೆ ಎಂದು ಇಲ್ಲಿನ ಜನ ಭಯಪಡುತ್ತಿದ್ದಾರೆ. ಇದಕ್ಕಾಗಿ ಈ ಪ್ರದೇಶದ ಜನ ಯುದ್ಧ ಪ್ರಾರಂಭವಾಗುವ ಮೊದಲು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ರಷ್ಯಾದಲ್ಲಿ ತುರ್ತು ಪರಿಸ್ಥಿತಿ
ಉಕ್ರೇನ್‌ನಿಂದ ಹೆಚ್ಚಿನ ಸಂಖ್ಯೆಯ ಜನರು ವಲಸೆ ಹೋಗುತ್ತಿರುವ ಹಿನ್ನೆಲೆಯಲ್ಲಿ, ರಷ್ಯಾ ತನ್ನ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಆದಾಗ್ಯೂ, ರಷ್ಯಾ ತನ್ನ ಜನರನ್ನು ರಕ್ಷಿಸಲು 400 ಯೋಧರನ್ನು ಹಾಗೂ 150 ವಾಹನಗಳನ್ನು ನಿಯೋಜನೆ ಮಾಡಿದೆ. ವಲಸಿಗರನ್ನು ಕರೆತರಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ರಷ್ಯಾದ ತುರ್ತು ವಿಭಾಗ ಹೇಳಿದೆ.

ಇದುವರೆಗೆ 24 ಸೇನಾ ನೆಲೆಗಳ ಮೇಲೆ ದಾಳಿ
ಪ್ರತ್ಯೇಕತಾವಾದಿ ಸಂಘಟನೆಗಳು ಉಕ್ರೇನ್‌ನಲ್ಲಿ ಸುಮಾರು 24 ಸೇನಾ ನೆಲೆಗಳ ಮೇಲೆ ದಾಳಿ ನಡೆಸಿವೆ. ಇದರಲ್ಲಿ ಉಕ್ರೇನ್ ಯೋಧ ಹುತಾತ್ಮರಾಗಿದ್ದು, ಶುಕ್ರವಾರ ರಾತ್ರಿ ಮುಖ್ಯ ಭದ್ರತಾ ಅಧಿಕಾರಿಯೊಬ್ಬರ ಕಾರನ್ನು ಸ್ಫೋಟಿಸಲಾಗಿತ್ತು. ಇದಲ್ಲದೇ ಶಾಲೆಯೊಂದರ ಮೇಲೂ ದಾಳಿ ನಡೆಸಲಾಗಿದೆ.

ಮ್ಯೂನಿಚ್ ತಲುಪಿದ ಉಕ್ರೇನ್ ಅಧ್ಯಕ್ಷ
ರಷ್ಯಾದೊಂದಿಗೆ ಒಪ್ಪಂದಕ್ಕಾಗಿ ಮ್ಯೂನಿಚ್‌ಗೆ ಆಗಮಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ ಕಿ, ಅಧ್ಯಕ್ಷ ವ್ಲಾಡಿಮಿರ್ ಭಾವನಾತ್ಮಕ ಮನವಿ ಮಾಡಿದ್ದಾರೆ. ಉಕ್ರೇನ್‌ನಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾಶ್ಚಿಮಾತ್ಯ ದೇಶಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಉಕ್ರೇನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪುಟಿನ್ ಅವರೊಂದಿಗಿನ ಮಾತುಕತೆಗೆ ತಾನು ಯಾವಾಗಲೂ ಬಾಗಿಲು ತೆರೆದಿದ್ದೇನೆ ಎಂದು ಹೇಳಿದ್ದಾರೆ. ಈ ಮಧ್ಯೆ, ಪಾಶ್ಚಿಮಾತ್ಯ ದೇಶಗಳು ತಕ್ಷಣವೇ ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ಝೆಲೆನ್ಸ್ ಕಿ ಕರೆ ನೀಡಿದ್ದಾರೆ.

ಗಡಿಯಲ್ಲಿ ರಷ್ಯಾ ಶಕ್ತಿ ಪ್ರದರ್ಶನ
ಯುದ್ಧದ ಪರಿಸ್ಥಿತಿಯ ನಡುವೆಯೇ ಉಕ್ರೇನ್ ಗಡಿಯಲ್ಲಿ ರಷ್ಯಾ ಶಕ್ತಿ ಪ್ರದರ್ಶಿಸಿದೆ. ಪ್ರದರ್ಶನದ ಸಮಯದಲ್ಲಿ, ರಷ್ಯಾ ತನ್ನ ಮೂರು ಹೊಸ ಪರಮಾಣು ಕ್ಷಿಪಣಿಗಳನ್ನು ಉಡಾಯಿಸಿತು. ಈ ಕ್ಷಿಪಣಿಗಳಲ್ಲಿ ಒಂದು ಹೈಪರ್ಸಾನಿಕ್ ವೇಗ ಹೊಂದಿದ್ದು, ಅಮೆರಿಕಾದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಪ್ರತಿಸ್ಪರ್ಧಿಯಾಗಿದೆ. ರಷ್ಯಾದ ಉಳಿದ ಎರಡು ಕ್ಷಿಪಣಿಗಳು ವಾಯು ಉಡಾವಣೆ ಮತ್ತು ಸಮುದ್ರ ಆಧಾರಿತವಾಗಿವೆ.

ಸುದ್ದಿ ಓದಿ