ಮುಧೋಳ

ಶಾಂತಿಯುತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಶಾಂತಿಯುತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ


     ಮುಧೋಳ: ಹಿಜಾಬ್ ಕೇಸರಿ ಶಾಲುಗಳ ಗದ್ದಲದ ನಡುವೆ ಯಾವೂದೇ ಅಹಿತಕರ ಘಟನೆಗಳು ನಡೆಯದೆ ಎಸ್‌.ಎಸ್‌.ಎಲ್‌.ಸಿ ಪ್ರಥಮ ಭಾಷಾ ಪರೀಕ್ಷೆ ಶಾಂತಿಯುತವಾಗಿ ಜರುಗಿತು.ಶೇ.98.76ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 

     ಮುಧೋಳದ ನಾಲ್ಕು, ಮಹಾಲಿಂಗಪೂರದ ಮೂರು, ಲೋಕಾಪೂರದ ಎರಡು ಹಾಗೂ ಇಂಗಳಗಿ, ಮಂಟೂರ, ನಾಗರಾಳ, ಕೆಸರಗೊಪ್ಪ, ಶಿರೋಳ, ಬೆಳಗಲಿ, ಚಿಚಖಂಡಿ ಬಿ.ಕೆ, ಮೆಳ್ಳಿಗೇರಿ, ಯಡಹಳ್ಳಿ, ಸೋರಗಾಂವದ ತಲಾ ಒಂದು ಪರೀಕ್ಷಾ ಕೇಂದ್ರ ಸಹಿತ ಒಟ್ಟು 19 ಪರೀಕ್ಷಾ ಕೇಂದ್ರದಲ್ಲಿ ರಿಪಿಟರ್ ಸೇರಿ ಒಟ್ಟು 5265 ವಿದ್ಯಾರ್ಥಿಗಳಲ್ಲಿ 5200 ವಿದ್ಯಾರ್ಥಿಗಳು ಹಾಜರಾಗಿದ್ದರು, ಇದರಲ್ಲಿ ಹೊಸದಾಗಿ  5227 ವಿದ್ಯಾರ್ಥಿಗಳಲ್ಲಿ 5175 ವಿದ್ಯಾರ್ಥಿಗಳು ಹಾಜರಾಗಿದ್ದರು,52 ವಿದ್ಯಾರ್ಥಿಗಳು ಗೈರಾಗಿದ್ದರು. 38 ರಿಪಿಟರ್ ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಹಾಜರಾಗಿದ್ದರು 13 ವಿದ್ಯಾರ್ಥಿಗಳು ಗೈರಾಗಿದ್ದರು. 

   ತಹಸೀಲ್ದಾರ ಮಹೇಶ ಪಾಂಡವ, ತಾ.ಪಂ ಇಓ ಕಿರಣ ಘೋರೆ​‍್ಡ,ಬಿಇಓ ಸಮೀರ ಮುಲ್ಲಾ ನೇತೃತ್ವದ ಮೂರು ತಂಡಗಳು ತಾಲ್ಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿವರ್ಹಣೆ ಮಾಡಿದ್ದವು ಯಾವೂದೇ ಅಹಿತರಕರ ಘಟನೆಗಳು ನಡೆಯದಂತೆ .ಸಿಪಿಐ ಎಚ್‌.ಆರ್‌.ಪಾಟೀಲ ನೇತೃತ್ವದ ಪೋಲಿಸ್ ತಂಡ ಸೂಕ್ತ ಬಂದೂಬಸ್ತನೊಂದಿಗೆ ಹದ್ದಿನ ಕಣ್ಣು ಇಟ್ಟಿದ್ದರು. 

 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಜಿಲ್ಲಾ ನ್ಯೂಡಲ್ ಆಗಿ ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ (ಅಭಿವೃದ್ಧಿ)ಉಪನಿರ್ದೆಶಕ ಎಸ್‌.ಪಿ.ಬಾಡಗಂಡಿ ಮುಧೋಳ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿ ಮಾತನಾಡಿ ತಾಲ್ಲೂಕಿನ ಎಲ್ಲ 19 ಕೇಂದ್ರಗಳಲ್ಲಿ ಪರೀಕ್ಷೆಯು ಶಾಂತಿಯುತವಾಗಿ ನಡೆದಿದ್ದು ಈ ನಿಟ್ಟಿನಲ್ಲಿ ವಿವಿದ ಇಲಾಖೆಯ ಜತೆಗೆ ಪೋಲಿಸ್ ಇಲಾಖೆ ಉತ್ತಮ ಕಾರ್ಯ ಮಾಡಿದೆ ಎಂದು ಹೇಳಿದರು.ಮುಧೋಳದ ಆರ್‌.ಎಂ.ಜಿ,ಶಿರೋಳದ ಸರ್ಕಾರಿ ಪ್ರಾಥಮಿಕ,ಪ್ರೌಢ ಶಾಲೆ,ಚಿಚಖಂಡಿ ಬಿ.ಕೆ.ಯ ಮಲ್ಲಪ್ಪಣ್ಣ ನೀಲಿ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿದ್ದರು. 

   ಸಿಪಿಐ ಎಚ್‌.ಆರ್‌.ಪಾಟೀಲ ಮಾತನಾಡಿ ಶಾಂತಿ, ಸುವ್ಯವಸ್ಥೆಗೆ ಹೆಸರಾದ ಮುಧೋಳ ತಾಲ್ಲೂಕಿನಲ್ಲಿ ಯಾವೂದೇ ಅಹಿತಕರ ಘಟನೆ ನಡೆಯುವದಿಲ್ಲ ಎಲ್ಲ ವಿದ್ಯಾರ್ಥಿಗಳು ಸಹಕಾರ ನೀಡಿದ್ದು ಗೊಂದಲವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ಹೇಳಿದ್ದರು. .ಸಿಪಿಐ ಎಚ್‌.ಆರ್‌.ಪಾಟೀಲ್,ಆರ್‌.ಎಲ್‌.ಯರಡಗಿ, ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ತಾಲ್ಲೂಕಾ ನ್ಯೂಡಲ್ ಸಂಗಮೇಶ ನೀಲಗುಂದ ಇದ್ದರು. 


ಸುದ್ದಿ ಓದಿ