ಬ್ಯಾಡ್ಗಿ

ಕಾಗಿನೆಲೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ

ಕಾಗಿನೆಲೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ

ಬ್ಯಾಡಗಿ  23: ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ. ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯುವುದರೊಂದಿಗೆ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಬೇಕು ಎಂದು ಕಾಗಿನೆಲೆ ಪಿಎಸ್‌ಐ ಸಾಗರ ಹೇಳಿದರು.

ಬುಧವಾರ ಕಾಗಿನೆಲೆಯ  ಪೊಲೀಸ್ ಇಲಾಖೆ ವತಿಯಿಂದ ನಡೆದ ಗೌರಿ ಗಣೇಶ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಗಿನೆಲೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದ ಇತಿಹಾಸವಿಲ್ಲ. ಅಣ್ಣ ತಮ್ಮಂದಿರಂತೆ ಒಡನಾಟ ಹೊಂದಿದ್ದಾರೆ.ಗ್ರಾಮದ ಜನರ ಸುರಕ್ಷತೆ ಮುಖ್ಯ. ಆಚರಣೆ ಸಂತೋಷದಿಂದ ಕೂಡಿರಬೇಕು. ಸರ್ಕಾರದ ನಿಯಮಾನುಸರ ಆಚರಿಸುವುದು ಸೂಕ್ತ. ಪರಿಸರಕ್ಕೆ ಹಾನಿಯಾಗದ ಮಣ್ಣಿನ ಗಣಪ ಬಳಸಬೇಕು. ಗಣೇಶ ವಿಸರ್ಜನೆಯನ್ನು  ಗುರುತಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಡಿಜೆ ಬಳಕೆ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಪಾಲಿಸಲೇಬೇಕು ಎಂದರು.

ಸಭೆಯಲ್ಲಿ ಸಮಾಜ ಸೇವಕಿ ಪ್ರೇಮಾ ಜೋಗುಳ, ಜಗದೀಶ್ ಪೂಜಾರ ಮಾತನಾಡಿದರು. ಕಾರ್ಯಕ್ರಮದಲ್ಲಿ  ಸದು ಪಾಟೀಲ, ಮುನ್ನಾ ಎಲಿಗಾರ, ತಸಿಲ್ದಾರ್  ಅಂಜುಮನ್ ಅಧ್ಯಕ್ಷ ಹಜರತ್ತಲಿ ಕೋಧಿ ವಕೀಲ್ ಮತ್ತೆಹಳ್ಳಿ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ