ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರೊಂದಿಗೆ ಪಾಲಕರು ಪಾಲುದಾರರು: ಮೇ. ವ್ಹಿ. ಎಸ್.ತುಗಶೆಟ್ಟಿ
ಕಾಗವಾಡ 04 : ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದ್ದು, ಮಹಾವಿದ್ಯಾಲಯದಲ್ಲಿ ಇವತ್ತು ಹಳೆ ವಿದ್ಯಾರ್ಥಿಗಳ ಮೂರನೇ ಪೀಳಿಗೆಯು ವಿದ್ಯಾಭ್ಯಾಸ ಮಾಡುತ್ತಿದ್ದಾರೆಂದು ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೇ. ವ್ಹಿ.ಎಸ್. ತುಗಶೆಟ್ಟಿ ಹೇಳಿದ್ದಾರೆ.
ಅವರು, ಬುಧವಾರ ದಿ. 03 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪಾಲಕರ ಮತ್ತು ಪ್ರಾಚಾರ್ಯರ ಸಭೆಯನ್ನು ಉದ್ದೇಶಿಸಿ, ಮಾತನಾಡುತ್ತಿದ್ದರು. ಈ ಪಾಲಕ-ಶಿಕ್ಷಕರ ಸಭೆಯ ಮೂಲ ಉದ್ದೇಶ ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವುದು ಮತ್ತು ಸಾಧನೆಗಳನ್ನು ಸಂಭ್ರಮಿಸುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಪಿ. ತಳವಾರ ಮಾತನಾಡಿ, ಪಾಲಕರು, ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಇವರಿಬ್ಬರ ಸಮಾನ ಪಾಲುದಾರರು. ಮಹಾವಿದ್ಯಾಲಯದ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಸದ್ಬಳಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳ ನೈಜ ಪರಿಸ್ಥಿತಿಯನ್ನು ತಿಳಿದುಕೊಳ್ಳುವುದೇ ಈ ಸಭೆಯ ಮೂಲ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಜೆ.ಕೆ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಕರ ಪ್ರತಿನಿಧಿಯಾಗಿ ರಾಮು ಹೊನ್ನಮಾನೆ ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಕರನ್ನು ಸನ್ಮಾನಿಸಲಾಯಿತು. ಈ ವೇಳೆ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಪಾಲಕರು ಉಪಸ್ಥಿತರಿದ್ದರು. ಕು. ರಿಯಾ ರೂಗೆ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಪಾಲಕ-ಶಿಕ್ಷಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ. ಆರ್.ಎಸ್. ನಾಗರಡ್ಡಿ ಸ್ವಾಗತಿಸಿದರು. ಎಸ್.ಎಸ್. ಫಡತರೆ ನಿರೂಪಿಸಿದರು. ಪ್ರೊ. ವ್ಹಿ. ಬಿ.ಬುರ್ಲೆ ವಂದಿಸಿದರು.