ಅಂತರರಾಷ್ಟ್ರೀಯ

ಮದುವೆ ಬ್ಯಾಂಡ್ ಸದ್ದಿಗೆ ಪಥ’ಸಂಚಲನ’ದ ಸ್ಟೆಪ್ಸ್; ವಿಡಿಯೋ ವೈರಲ್

ಮದುವೆ ಬ್ಯಾಂಡ್ ಸದ್ದಿಗೆ ಪಥ’ಸಂಚಲನ’ದ ಸ್ಟೆಪ್ಸ್; ವಿಡಿಯೋ ವೈರಲ್

ನವದೆಹಲಿ: ಏಪ್ರಿಲ್ 21 : ಪ್ರಸ್ತುತ ಸಮಾಜದಲ್ಲಿ ಕೈಯಲ್ಲೊಂದು ಮೊಬೈಲ್ ಇದ್ರೆ ಸಾಕು ಇಡೀ ವಿಶ್ವವೇ ನಿಮ್ಮ ಕೈಬೆರಳ ತುದಿಯಲ್ಲಿರುತ್ತೆ. ಮೊಬೈಲ್ ಬಂದಾಗಿನಿಂದ ಪ್ರಪಂಚವೇ ಚಿಕ್ಕದು ಅನಿಸ್ತಿದೆ. ಅನೇಕ ಸಂಗತಿ, ವಿಚಾರ, ಘಟನೆಗಳು ಕ್ಷಣಮಾತ್ರದಲ್ಲಿ ವಿಶ್ವದ ಮೂಲೆ ಮೂಲೆ ತಲುಪುತ್ತವೆ. ಕೆಲವು ವಿಡಿಯೋಗಳಂತೂ ಭಾರೀ ವೈರಲ್ ಆಗಿಬಿಡ್ತವೆ. ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

ಮದುವೆಯಲ್ಲಿ ವಿಶಿಷ್ಟವಾದ ನೃತ್ಯವನ್ನು ತೋರಿಸುವ ವಿಡಿಯೋಗೆ ಜನ ಫಿದಾ ಆಗಿದ್ದಾರೆ.  ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ವಿಡಿಯೋ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ.   ವಿಡಿಯೋದಲ್ಲಿ ಸ್ಥಳವನ್ನ ಉಲ್ಲೇಖಿಸದಿದ್ದರೂ, 29-ಸೆಕೆಂಡ್‌ಗಳ ವೀಡಿಯೊ ಭಾರೀ ವೈರಲ್ ಆಗಿದೆ. ಮದುವೆಯಲ್ಲಿ ಡ್ರಮ್ಮರ್‌ಗಳ ಸುತ್ತಲೂ ಮಾರ್ಚ್ ಪಾಸ್ಟ್ ಅನ್ನು ಅನುಕರಿಸುವ ಮೂಲಕ ವ್ಯಕ್ತಿಯ ನೃತ್ಯ ಪ್ರಾರಂಭವಾಗುತ್ತದೆ.

ಸೆಲ್ಯೂಟ್ ಹೊಡೆಯುತ್ತಾ ವಿಭಿನ್ನ ಶೈಲಿಯಲ್ಲಿ ನೃತ್ಯ ಮಾಡುವ ವ್ಯಕ್ತಿಯ ಬಗ್ಗೆ ಕುತೂಹಲ ಹೆಚ್ಚಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಕೆಲವು ದಿನಗಳ ಹಿಂದೆ ರೈಲು ತನ್ನ ಮೇಲೆ ಹಾದುಹೋದ ತಕ್ಷಣ ಮಹಿಳೆ ತನ್ನ ಸೆಲ್‌ಫೋನ್‌ನಲ್ಲಿ ಶಾಂತವಾಗಿ ಮಾತನಾಡುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ರು.

ಸುದ್ದಿ ಓದಿ