ತಾಲಿಬಾನ್ ವಿರುದ್ಧ ಹೋರಾಟ ಮುಂದುವರಿಕೆ; ಪಂಜಶೀರ್ ಪ್ರತಿರೋಧ ಪಡೆ
ಕಾಬೂಲ್, ಸೆ 2: ಅಫ್ಗಾನಿಸ್ತಾನದ ಈಶಾನ್ಯ ಪ್ರಾಂತ್ಯದ ಪಂಜ್‌ಶಿರ್‌ನಲ್ಲಿನ ಪ್ರತಿರೋಧ ಪಡೆಗಳು ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಬುಧವಾರ ಹೇಳಿಕೆ ನೀಡಿವೆ. ಈ ಪಡೆಗಳ ಮುಖಂಡರೊಂದಿಗೆ ತಾಲಿಬಾನ್‌ನ ಮಾತುಕತೆಗಳು ಫಲಪ್ರದವಾಗಿಲ್ಲ.
ಹಿಂದಿನ ದಿನ ಸ್ಪುಟ್ನಿಕ್ ನೊಂದಿಗೆ ಮಾತನಾಡಿದ ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್, ಪಂಜಶೀರ್ ಮೇಲೆ ಬಲವಂತದ ಸ್ವಾಧೀನ ಇಲ್ಲ. ಪ್ರತಿರೋಧದ ನಾಯಕರೊಂದಿಗಿನ ಮಾತುಕತೆ ವಿಫಲವಾಗಿದೆ ಎಂದು ಘೋಷಿಸಿದರು. ಜೊತೆಗೆ, ಆ ಪ್ರಾಂತ್ಯಕ್ಕೆ ಪ್ರವೇಶಿಸಲು ತಾಲಿಬಾನ್ ಯೋಜಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದರು.
ಪಂಜಶೀಲ್ ಪಡೆಯ ನಾಯಕರಿಗೆ ತಾಲಿಬಾನ್ ಸರ್ಕಾರದಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ನೀಡುವ ಪ್ರಸ್ತಾವ ಮುಂದಿರಿಸಲಾಗಿತ್ತು. ಆದರೆ, ಪ್ರತಿರೋಧಿಗಳನ್ನು ಅದನ್ನು ತಿರಸ್ಕರಿಸಿದ್ದಾರೆ.
ಪಂಜ್‌ಶಿರ್ ದಿವಂಗತ ಮಾಜಿ ಅಫ್ಘಾನ್ ಗೆರಿಲ್ಲಾ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಮತ್ತು ತನ್ನನ್ನು ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ನೇತೃತ್ವದಲ್ಲಿ ಪ್ರತಿರೋಧ ನಡೆಸಲಾಗುತ್ತಿದೆ.
ತಮ್ಮ ಗುಂಪನ್ನು ಒಳಗೊಂಡ ಸರ್ಕಾರ ರಚಿಸಿದರೆ ಮತ್ತು ಎಲ್ಲಾ ಆಫ್ಗನ್ನರಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸಿದರೆ ರಾಜೀನಾಮೆ ನೀಡುವುದಾಗಿ ಮಸೂದ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.