ಅಂತರರಾಷ್ಟ್ರೀಯ

'ಪದ್ಮ ವಿಭೂಷಣ' ಪಂಡಿತ್ ಜಸ್ ರಾಜ್ ವಿಧಿವಶ

'ಪದ್ಮ ವಿಭೂಷಣ' ಪಂಡಿತ್ ಜಸ್ ರಾಜ್ ವಿಧಿವಶ

ವಾಷಿಂಗ್ಟನ್, ಆಗಸ್ಟ್ 17:  ‘ಪದ್ಮವಿಭೂಷಣ’ ಪಂಡಿತ್ ಜಸರಾಜ್ ಸೋಮವಾರ ವಿಧಿವಶರಾಗಿದ್ದಾರೆ. ಅಮೆರಿಕಾದ ನ್ಯೂಜೆರ್ಸಿಯಲ್ಲಿ ಕೊನೆ ಉಸಿರೆಳೆದಿದ್ದಾರೆ ಎಂದು ಅವರ ಪುತ್ರಿ ದುರ್ಗಾ ಜಸರಾಜ್ ಹೇಳಿದ್ದಾರೆ. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಂಡಿತ್ ಜಸರಾಜ್ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. ಸಾಂಪ್ರದಾಯಿಕ ರಾಗಗಳನ್ನು ಅಸಾಧಾರಣ ರೀತಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಸಂಗೀತ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹರಿಯಾಣದಲ್ಲಿ ಜನಿಸಿದ ಪಂಡಿತ್ ಜಸರಾಜ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಜಗತ್ತಿನಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದರು. ೮೦ ವರ್ಷಗಳ ಕಾಲ ಅವರು ಸಂಗೀತ ವೃತ್ತಿ ಜೀವನ ಸಾಗಿಸಿದ್ದರು. ಹಲವಾರು ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.ಕೇಂದ್ರ ಸರ್ಕಾರದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಗೌರವಕ್ಕೆ ಭಾಜನರಾಗಿದ್ದರು. ಅವರ ಹಾಡಿದ ಶಾಸ್ತ್ರೀಯ, ಸೆಮಿ ಕ್ಲಾಸಿಕಲ್ ಸಂಗೀತ ಕಚೇರಿಗಳು ಆಲ್ಬಮ್ ಗಳಾಗಿ, ಚಲನ ಚಿತ್ರಗಳ ಧ್ವನಿ ಫಥಗಳಾಗಿ ಜನರ ಮನಸ್ಸುಗಳಲ್ಲಿ ಅಚ್ಚು ಒತ್ತಿವೆ. ಅವರು ಭಾರತ, ಕೆನಡಾ, ಅಮೆರಿಕಾದಲ್ಲಿ ಅನೇಕ ಮಂದಿಗೆ ಸಂಗೀತ ಶಿಕ್ಷಣ ನೀಡಿದ್ದರು.

ಸುದ್ದಿ ಓದಿ