ಅಂತರರಾಷ್ಟ್ರೀಯ

ಇಮ್ರಾನ್ ಖಾನ್ ಕರಾಳ ಮುಖ: ಹಣಕ್ಕಾಗಿ ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ಬೆಂಬಲಿಸಿದ ಪಾಕ್ ಪ್ರಧಾನಿ

ಇಮ್ರಾನ್ ಖಾನ್ ಕರಾಳ ಮುಖ: ಹಣಕ್ಕಾಗಿ ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ಬೆಂಬಲಿಸಿದ ಪಾಕ್ ಪ್ರಧಾನಿ

ಹೊಸದಿಲ್ಲಿ: ಫೆಬ್ರವರಿ 07: ಚೀನಾದ ಸಹಕಾರವನ್ನು ಪಡೆಯಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುವ ಉಯಿಘರ್‌ಗಳ ಮೇಲಿನ ದೌರ್ಜನ್ಯವನ್ನು ಬೆಂಬಲಿಸುವ ಮಟ್ಟಕ್ಕೆ ಇಳಿದಿದ್ದಾರೆ. ಚೀನಾ ಏನು ಮಾಡಿದರೂ ಅದು ಸರಿಯಾಗಿದೆ. ನಾವು ಅದರ ನೀತಿಗಳನ್ನು ಬೆಂಬಲಿಸುತ್ತೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯದ ನಂತರ ಚೀನಾ ವಿರುದ್ಧದ ವಿಶ್ವದ ಸುಮಾರು 243 ಸಂಘಟನೆಗಳ ಆರೋಪಗಳನ್ನು ಪಾಕಿಸ್ತಾನವು ಸ್ಪಷ್ಟವಾಗಿ ತಿರಸ್ಕರಿಸಿದೆ. ಬೀಜಿಂಗ್‌ನಲ್ಲಿ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಪಾಕಿಸ್ತಾನವು ತೈವಾನ್, ದಕ್ಷಿಣ ಚೀನಾ ಸಮುದ್ರ, ಹಾಂಗ್ ಕಾಂಗ್, ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್‌ನಲ್ಲಿ ಚೀನಾದ ನೀತಿಗಳನ್ನು ಬೆಂಬಲಿಸುತ್ತದೆ. ಪಾಕಿಸ್ತಾನದ ಈ ಬೆಂಬಲದಿಂದ, ಚೀನಾ ಗಡಿ ಹಂಚಿಕೊಂಡಿರುವ ರಾಷ್ಟ್ರಗಳೊಂದಿಗೆ ತಂಟೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಪಾಕ್ ಪ್ರಧಾನಿಯ ಕರಾಳ ಮುಖ ಬಯಲಿಗೆ ಬಂದ ನಂತರ ಅವರದೇ ದೇಶದಲ್ಲೇ ಟೀಕೆ ವ್ಯಕ್ತವಾಗಿದೆ. ಚೀನಾದ ಈ ಕಠಿಣ ನೀತಿಯ ಬಗ್ಗೆ ಅನೇಕ ಪಾಶ್ಚಿಮಾತ್ಯ ದೇಶಗಳೊಂದಿಗೆ ವಿವಾದವಿದೆ. ಅನೇಕ ಪಾಶ್ಚಿಮಾತ್ಯ ದೇಶಗಳು ಬೀಜಿಂಗ್‌ನ ನೀತಿಗಳನ್ನು ಬಲವಾಗಿ ಟೀಕಿಸುತ್ತಿವೆ.

ಪಾಕಿಸ್ತಾನಕ್ಕೆ ಸಹಕರಿಸುವ ಭರವಸೆ

ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಬೆಂಬಲಿಸುವುದಾಗಿ ಚೀನಾ ಕೂಡ ಭರವಸೆ ನೀಡಿದೆ. ಅಷ್ಟೇ ಅಲ್ಲ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ನೀಡುವ ಬಗ್ಗೆಯೂ ಚೀನಾ ಮಾತನಾಡಿದೆ. ಚೀನಾ ಕೂಡ ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಬೆಂಬಲಿಸಿದೆ.

ಉಯಿಘರ್ ಮುಸ್ಲಿಮರು ಯಾರು?

ಉಯಿಘರ್‌ಗಳು ಮುಸ್ಲಿಂ ಅಲ್ಪಸಂಖ್ಯಾತ ತುರ್ಕಿಕ್ ಜನಾಂಗೀಯ ಗುಂಪಿಗೆ ಸೇರಿದವರು. ಅವರು ಮೂಲತಃ ಮಧ್ಯ ಮತ್ತು ಪೂರ್ವ ಏಷ್ಯಾದವರು. ಅವರ ಭಾಷೆ ಟರ್ಕಿಶ್. ಚೀನಾದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿರುವ 55 ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಉಯಿಘರ್‌ಗಳು ಒಬ್ಬರು. ಪ್ರಸ್ತುತ, ಉಯಿಘರ್ ಮುಸ್ಲಿಮರ ಅತಿದೊಡ್ಡ ಜನಸಂಖ್ಯೆಯು ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ವಾಸಿಸುತ್ತಿದೆ.

ಉಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ

ಚೀನಾದ ಮಾಜಿ ಅಧಿಕಾರಿ ಜಿಯಾಂಗ್, ಚೀನಾದಲ್ಲಿ ಉಯಿಘರ್ ಮುಸ್ಲಿಮರ ಸ್ಥಿತಿಯ ಬಗ್ಗೆ ಅನೇಕ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಚೀನಾದ ಬಂದಿಖಾನೆಯಲ್ಲಿ ಉಯಿಘರ್ ಜನಾಂಗಕ್ಕೆ ಮುಸ್ಲಿಂರನ್ನು ಕುರ್ಚಿ ಮತ್ತು ಹಗ್ಗಕ್ಕೆ ಕಟ್ಟಲಾಗುತ್ತದೆ ಎಂದು ಜಿಯಾಂಗ್ ಹೇಳಿದ್ದರು. ಚೀನಿ ಅಧಿಕಾರಿಗಳ ಷರತ್ತನ್ನು ಒಪ್ಪಿಕೊಳ್ಳದವರಿಗೆ ಥಳಿಸಲಾಗುತ್ತದೆ. ಅವರಿಗೆ ಮಲಗಲೂ ಅವಕಾಶವಿಲ್ಲ. ಪುರುಷರನ್ನು ಹೊರತುಪಡಿಸಿ ಮಹಿಳೆಯರಿಗೂ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಜಿಯಾಂಗ್ ಬಹಿರಂಗಪಡಿಸಿದ್ದರು

ಸುದ್ದಿ ಓದಿ