ಅಫ್ಗನ್ ಮೇಲೆ ಪಾಕ್ ದಾಳಿ: 69 ತಾಲಿಬಾನಿಗಳ ಸಾವು
Pakistan attacks Afghanistan: 69 Taliban killed
ಇಸ್ಲಾಮಾಬಾದ್: ಅಫ್ಗಾನಿಸ್ತಾನ "ರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಅಫ್ಗನ್ನ ಮತ್ತೆ 69 ತಾಲಿಬಾನ್ ಅಧಿಕಾರಿಗಳನ್ನು ಮತ್ತು ಅವರ ಬೆಂಬಲಿತ ಭಯೋತ್ಪಾದಕರನ್ನು ಒಂದೇ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಮಂಗಳವಾರ ಬೆಳಗಿನ ಜಾವ ನೈರುತ್ಯ ಭಾಗದ ಗಡಿಯಲ್ಲಿ ನಡೆದ ಪಾಕಿಸ್ತಾನ ಸೇನೆಯ ದಾಳಿಗಳಲ್ಲಿ 69 ತಾಲಿಬಾನ್ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರು ಸತ್ತಿದ್ದಾರೆ ಎಂದು ತಿಳಿಸಿದೆ. ಈ ಮೊದಲು ದಾಳಿ ಶುರುವಾತಿನಿಂದ ಸುಮಾರು 331 ಅಫ್ಗನ್ನ ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ತಿಳಿಸಿತ್ತು.
ಅನೇಕ ತಾಲಿಬಾಲಿನಿಗಳು ಚಮನ್ ಜಿಲ್ಲೆಯ ಗಡಿಯಲ್ಲಿ ಯಾವುದೇ ಶಸ್ತ್ರಗಳಿದಲ್ಲದೇ ನಮ್ಮವರನ್ನು ಬರಿಗೈಯಲ್ಲಿ ಎದುರಿಸಲು ಬಂದು ಹತರಾಗಿದ್ದಾರೆ ಎಂದು ಮಾ"ತ ಸಚಿವ ಆತುಲ್ಲಾ ತಾರರ್ ತಿಳಿಸಿದ್ದಾರೆ. ಖೈಬರ್ ಪಂಕ್ತುವ್ವಾ ಪ್ರಾಂತ್ಯದ 12 ಸ್ಥಳಗಳಲ್ಲಿ ಅಫ್ಗನ್ "ರುದ್ಧ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮ ಕಡೆ ಇಂದು ಯಾವುದೇ ಸಾವು ನೋವುಗಳಾಗಿಲ್ಲ ಎಂದು "ವರಿಸಿದ್ದಾರೆ.
2,600 ಕಿಲೋ "ುಟರ್ ಉದ್ದದ ಗಡಿಗೆ ಹೊಂದಿಕೊಂಡ ಪಾಕ್ನ 53 ಸ್ಥಳಗಳನ್ನು ಗುರಿಯಾಗಿಸಿ ಅಫ್ಗಾನಿಸ್ತಾನ ಕಳೆದ ಫೆಬ್ರುವರಿ 26 ರಂದು ದಾಳಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಶುಕ್ರವಾರ ಪಾಕಿಸ್ತಾನ ಸೇನೆ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಕಂದಹಾರ್ಗಳ ಮೇಲೂ ಬಾಂಬ್ ದಾಳಿ ನಡೆಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಅಫ್ಗನಿಸ್ತಾನದಿಂದ ಪಾಕಿಸ್ತಾನದ ಕಡೆಗೆ ಡ್ರೋನ್ ದಾಳಿ ಮುಂದುವರಿದ ಕಾರಣ ಪಾಕಿಸ್ತಾನದ ಗಡಿಯ ಅನೇಕ ಜಿಲ್ಲೆಗಳಲ್ಲಿ ್ಞ್ಣ್ಚ್ಣ- ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮೊಹಮಂದ್ನಲ್ಲಿ 54, ಘಲಾನೈನಲ್ಲಿ 1, ಬೈಜೈನಲ್ಲಿ 33, ಸಫಿಯಲ್ಲಿ 10 ಹಾಗೂ ಖ್ವೆಜೈನಲ್ಲಿ 2 ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ವಜೀರಿಸ್ತಾನದಲ್ಲಿ 33, ಬಾಜೌರ್ನಲ್ಲಿ 39 ಶಾಲೆಗಳಿಗೂ ಬೀಗ ಹಾಕಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 