ಪಾಕಿಸ್ತಾನ ಸಂಸದ ಅಮೀರ್ ಲಿಯಾಕತ್ ಹುಸೇನ್ ನಿಧನ
ಇಸ್ಲಾಮಾಬಾದ್: ಜೂನ್ 09 :ಅನಾರೋಗ್ಯದ ಹಿನ್ನೆಲೆ ಮನೆಯಲ್ಲಿ ಕುಸಿದು ಬಿದ್ದು ಪಾಕಿಸ್ತಾನದ ಸಂಸದ ಅಮೀರ್ ಲಿಯಾಕತ್ ಹುಸೇನ್ ನಿಧನರಾಗಿದ್ದಾರೆ.ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಅವರನ್ನು ಅಗಾ ಖಾನ್ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ನಾಯಕ ಜಮಾಲ್ ಸಿದ್ದಿಕಿ ಅವರ ಸಾವನ್ನು ದೃಢೀಕರಿಸಿದರು.
ಶವಪರೀಕ್ಷೆ ಬಳಿಕವಷ್ಟೇ ಅಮೀರ್ ಲಿಯಾಖತ್ ಸಾವಿಗೆ ಕಾರಣ ತಿಳಿಯಲಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಲಿಯಾಖತ್ ಗುರುವಾರ ರಾತ್ರಿ ಅನಾರೋಗ್ಯಕ್ಕೆ ಒಳಗಾದರು ಆದರೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದರು. ಲಿಯಾಖತ್ ಜೋರಾಗಿ ಕಿರುಚುವುದನ್ನು ಕೇಳಿಸಿಕೊಂಡ ಸಿಬ್ಬಂದಿ ಅವರು ಬಾಗಿಲು ಒಡೆದು ಆಸ್ಪತ್ರೆಗೆ ಸಾಗಿಸಿದರು.ಅಮೀರ್ ಲಿಯಾಕತ್ ಹುಸೇನ್ ಅವರ ಸಾವಿನ ಬಗ್ಗೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವರ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರಾಚಿಯ ಖುದಾದಾದ್ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಪೂರ್ವ ಕರಾಚಿ ಡಿಐಜಿ ಮುಕುದ್ದಾಸ್ ಹೈದರ್ ಹೇಳಿದರು.