ಅಂತರರಾಷ್ಟ್ರೀಯ

ಪಾಕಿಸ್ತಾನ: ಗಗನಕ್ಕೆ ಮುಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ

ಪಾಕಿಸ್ತಾನ: ಗಗನಕ್ಕೆ ಮುಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ

ಇಸ್ಲಾಮಾಬಾದ್: ಜೂನ್ 16:ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 24 ರೂ ಏರಿಕೆಯಾಗಿದ್ದು, ಈಗ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 209.86 ರಿಂದ 233.89 ರೂ.ಗೆ ಏರಿಕೆಯಾಗಿದೆ.

ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, ಹೊಸ ಬೆಲೆಗಳು ಜೂನ್ 15 ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿವೆ ಎಂದು ಹೇಳಿದರು.

ಇನ್ನು ಮುಂದೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಗಳನ್ನು ಭರಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ ಎಂದು ಹೇಳಿದ ಮಿಫ್ತಾ ಇಸ್ಮಾಯಿಲ್ ಪೆಟ್ರೋಲ್ ಬೆಲೆಯನ್ನು 24.03 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದು ಪ್ರತಿ ಲೀಟರ್‌ಗೆ 233.89 ರೂ. ಗಡಿ ಮುಟ್ಟಿದೆ ಎಂದರು.

ಅದೇ ರೀತಿ ಪಾಕಿಸ್ತಾನ ಜೂನ್ 15 ರಂದು ಡೀಸೆಲ್ ಮೇಲೆ 16.3 ರೂ. ಏರಿಸಿದ್ದು ಈಗ ಡೀಸೆಲ್ ಬೆಲೆ 204.15 ರಿಂದ 263.31 ರೂ. ಆಗಿದೆ. ಕಳೆದ 20 ದಿನಗಳಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ಸೀಮೆಎಣ್ಣೆ ಬೆಲೆ 29.49 ರೂ. ಏರಿಕೆಯಾಗಿದ್ದು, 181.94 ರೂ. ಇದ್ದ ಬೆಲೆ 211.43 ರೂ.ಗೆ ಏರಿದೆ.

ಸುದ್ದಿ ಓದಿ