ಪಾಕಿಸ್ತಾನ : 3,480 ಹೊಸ ಕೋವಿಡ್ ಪ್ರಕರಣ, 82 ಸಾವು
ಇಸ್ಲಾಮಾಬಾದ್, ಸೆ. 11: ಪಾಕಿಸ್ತಾನವು ಕಳೆದ 24 ಗಂಟೆಯಲ್ಲಿ ರ 3,480 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 82ಕ್ಕೂ ಹೆಚ್ಚಿನ ಸಾವುಗಳನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಇದರೊಂದಿಗೆ ದೇಶದಲ್ಲಿ ಸೋಂಕಿನ ಒಟ್ಟು ಸಂಖ್ಯೆ 1,201,367 ಕ್ಕೆ ಏರಿದೆ. 1,082,988 ಚೇತರಿಕೆ ಸಂಖ್ಯೆಯೂ ಇದರಲ್ಲಿ ಸೇರಿದೆ ಎಂದು ಮಾಹಿತಿ ನೀಡಿದೆ.
ದೇಶದಾದ್ಯಂತ ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 91,717 ಕ್ಕೆ ಏರಿಕೆಯಾಗಿದೆ, ಅವರಲ್ಲಿ 5,373 ನಿರ್ಣಾಯಕ ಸ್ಥಿತಿಯಲ್ಲಿದೆ.
ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯವು 443, 521 ಸೋಂಕುಗಳೊಂದಿಗೆ ದೇಶದ ಅತ್ಯಂತ ಪೀಡಿತ ಪ್ರದೇಶವಾಗಿದೆ. ಪೂರ್ವ ಪಂಜಾಬ್ ಪ್ರಾಂತ್ಯವು 411,808 ಪ್ರಕರಣಗಳನ್ನು ವರದಿ ಮಾಡಿದೆ.