ಅಂತರರಾಷ್ಟ್ರೀಯ

ಮಕ್ಕಳ ಪ್ರಾಣ ತೆಗೆದವರೊಂದಿಗೆ ಚರ್ಚೆಯೇ.. ಪಾಕ್‌ ಪ್ರಧಾನಿಗೆ ನ್ಯಾಯಾಲಯ ತರಾಟೆ

ಮಕ್ಕಳ  ಪ್ರಾಣ  ತೆಗೆದವರೊಂದಿಗೆ  ಚರ್ಚೆಯೇ.. ಪಾಕ್‌  ಪ್ರಧಾನಿಗೆ ನ್ಯಾಯಾಲಯ ತರಾಟೆ

ಇಸ್ಲಾಮಾಬಾದ್, ನ 11: ಪಾಕಿಸ್ತಾನದ  ತಾಲಿಬಾನ್‌  ಪಕ್ಷವಾಗಿರುವ     ತೆಹ್ರೀಕ್-ಎ-ತಾಲಿಬಾನ್  ಪಾಕಿಸ್ತಾನ (ಟಿಟಿಪಿ)ದ ಜೊತೆ   ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ  ಒಂದು ದಿನದ ನಂತರ    ಆ   ಸಂಘಟನೆ    ನಡೆಸಿದ   ಹತ್ಯಾಕಾಂಡಗಳ  ಬಗ್ಗೆ   ಆ  ದೇಶದ   ಸುಪ್ರೀಂ ಕೋರ್ಟ್  ಪ್ರಧಾನಿ ಇಮ್ರಾನ್ ಖಾನ್ ಅವರನ್ನು  ತರಾಟೆಗೆ  ತೆಗೆದುಕೊಂಡಿದೆ.    2014ರಲ್ಲಿ ಸೇನಾ ಶಾಲೆಯೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ 150 ಮಂದಿ   ಮಕ್ಕಳು  ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಇಮ್ರಾನ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು.

ಈ ಸಂದರ್ಭದಲ್ಲಿ  ನ್ಯಾಯಾಲಯ  ಇಮ್ರಾನ್‌  ಖಾನ್‌   ಅವರಿಗೆ   ಪ್ರಶ್ನೆಗಳ ಸುರಿಮಳೆಗೈದಿದೆ.  ಮಕ್ಕಳ ಪ್ರಾಣ ಬಲಿಪಡೆದವರ   ಮುಂದೆ ನೀವು ಮಂಡಿಯೂರಿ ಕೂರುತ್ತೀರಾ ಎಂದು ಕೇಳಿದೆ. . ‘ನೀವು ಅಧಿಕಾರದಲ್ಲಿದ್ದೀರಿ.   ಏನು ಮಾಡುತ್ತಿರುವಿರಿ?   ಆ  ಅಪರಾಧಿಗಳೊಂದಿಗೆ  ಮತ್ತೆ  ಮಾತುಕತೆ ನಡೆಸುತ್ತಿದ್ದೀರಿ ಎಂದು  ಮುಖ್ಯ ನ್ಯಾಯಮೂರ್ತಿ  ಅಹ್ಮದ್‌    ತೀವರ  ತರಾಟೆಗೆ  ತೆಗೆದುಕೊಂಡರು.    ಆಗ    ನಾವು    ಅಧಿಕಾರದಲ್ಲಿರಲಿಲ್ಲ,  ಸಂತ್ರಸ್ತರ ಕುಟುಂಬಗಳಿಗೆ ಪರಿಹಾರದಡಿ ಹಣ  ನೀಡಿದ್ದೇವೆ  ಎಂದು ಇಮ್ರಾನ್  ಖಾನ್‌   ಉತ್ತರಿಸಿದರು.   ಪ್ರಧಾನಿಯವರ ಮಾತುಗಳು     ಪ್ರಾಣಕಳೆದುಕೊಂಡ  ವಿದ್ಯಾರ್ಥಿಗಳ  ಪೋಷಕರ  ಗಾಯದ  ಮೇಲೆ    ಖಾರ   ಅರೆದಂತಿದೆ  ಎಂದು ಎಂದು ಮುಖ್ಯ ನ್ಯಾಯಮೂರ್ತಿಗಳು  ಆಕ್ರೋಶ ವ್ಯಕ್ತಪಡಿಸಿದರು. 

ಸುದ್ದಿ ಓದಿ