ಅಂತರರಾಷ್ಟ್ರೀಯ

ಅಫ್ಘನ್‌ ಶಿಯಾ ಮಸೀದಿ ಮೇಲೆ ಭಯೋತ್ಪಾದಕ ದಾಳಿ- ಪಾಕ್‌ ಖಂಡನೆ

ಅಫ್ಘನ್‌  ಶಿಯಾ ಮಸೀದಿ ಮೇಲೆ ಭಯೋತ್ಪಾದಕ ದಾಳಿ- ಪಾಕ್‌  ಖಂಡನೆ

ಇಸ್ಲಾಮಾಬಾದ್, ಅ16: ಅಫ್ಘಾನಿಸ್ತಾನದ   ದಕ್ಷಿಣ ಕಂದಹಾರ್ ಪ್ರಾಂತ್ಯದ  ರಾಜಧಾನಿ  ಕಂದಹಾರ್ ನಗರದ   ಶಿಯಾ  ಸಮುದಾಯದ  ಮಸೀದಿಯೊಂದರಲ್ಲಿ    ನಡೆದ   ಭಯೋತ್ಪಾದಕ   ದಾಳಿಯನ್ನು  ಪಾಕಿಸ್ತಾನ  ತೀವ್ರವಾಗಿ ಖಂಡಿಸಿದೆ.   ಶುಕ್ರವಾರ   ನಡೆದ  ದಾಳಿಯಲ್ಲಿ  30 ಕ್ಕೂ ಹೆಚ್ಚು ಮಂದಿ  ಸಾವನ್ನಪ್ಪಿ,  ಹಲವರು   ಗಾಯಗೊಂಡಿದ್ದರು ಎಂದು ವರದಿಯಾಗಿದೆ.

ಪ್ರಾರ್ಥನಾ  ಸ್ಥಳಗಳ ಮೇಲಿನ   ಹೇಯ ದಾಳಿಗಳು  ಸೇರಿದಂತೆ  ಎಲ್ಲಾ ಸ್ವರೂಪ  ಭಯೋತ್ಪಾದಕ  ಕೃತ್ಯಗಳನ್ನು ಪಾಕಿಸ್ತಾನ  ಖಂಡಿಸುತ್ತದೆ   ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸಂಕಷ್ಟದ   ಈ  ಸಮಯದಲ್ಲಿ   ಪಾಕಿಸ್ತಾನ  ಸರ್ಕಾರ,   ಜನತೆ     ಅಫ್ಘಾನಿಸ್ತಾನದ ಜನರಿಗೆ ತಮ್ಮ  ಬೆಂಬಲ  ಹಾಗೂ   ಸಂತಾಪ   ತಿಳಿಸುತ್ತದೆ ಎಂದು ಹೇಳಿದೆ.    

ಶಿಯಾ ಮುಸ್ಲಿಂ ಮಸೀದಿಯಲ್ಲಿ  ನೂರಾರು  ಮಂದಿ  ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ  ದಾಳಿ  ನಡೆಸಲಾಗಿದೆ  ಎಂದು  ಸ್ಥಳೀಯ ಮಾಧ್ಯಮಗಳು  ವರದಿ ಮಾಡಿವೆ. 

ಸುದ್ದಿ ಓದಿ