ಅಂತರರಾಷ್ಟ್ರೀಯ

ಇಮ್ರಾನ್ ಖಾನ್ ಗೆ ಬಿಗಿ ಭದ್ರತೆ ಒದಗಿಸುವಂತೆ ಪಾಕ್ ಪ್ರಧಾನಿ ಸೂಚನೆ

ಇಮ್ರಾನ್ ಖಾನ್ ಗೆ ಬಿಗಿ ಭದ್ರತೆ ಒದಗಿಸುವಂತೆ ಪಾಕ್ ಪ್ರಧಾನಿ ಸೂಚನೆ

ಇಸ್ಲಾಮಾಬಾದ್: ಏಪ್ರಿಲ್ 22 : ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರ ರ್ಯಾಲಿಗಳಲ್ಲಿ ಬಿಗಿ ಭದ್ರತೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬೆದರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿರ್ದೇಶನದ ಮೇರೆಗೆ ಆಂತರಿಕ ಸಚಿವಾಲಯವು ಇಮ್ರಾನ್ ಖಾನ್ ಅವರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದೆ.

ಆಂತರಿಕ ಸಚಿವಾಲಯವು ನಾಲ್ಕು ಪ್ರಾಂತ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಇಸ್ಲಾಮಾಬಾದ್‌ನ ಮುಖ್ಯ ಆಯುಕ್ತರಿಗೆ ತುರ್ತು ಪತ್ರವನ್ನು ಕಳುಹಿಸಿದ್ದು, ಇಮ್ರಾನ್ ಖಾನ್‌ಗೆ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದೆ. ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಲು ಮತ್ತು ಆದೇಶಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರಿಗೆ ಖುದ್ದು ನಿರ್ದೇಶನ ನೀಡಿದ್ದಾರೆ.

ಸಂಬಂಧಿತ ಅಧಿಕಾರಿಗಳು ಭದ್ರತಾ ಕ್ರಮಗಳ ಬಗ್ಗೆ ನಿರ್ದಿಷ್ಟವಾಗಿ ಇಮ್ರಾನ್ ಖಾನ್ ಅವರ ಸಾರ್ವಜನಿಕ ಱಲಿ ಮತ್ತು ಸಮಾರಂಭಗಳಲ್ಲಿ ನಿರ್ಲಕ್ಷ್ಯವನ್ನು ತೋರುವಂತಿಲ್ಲ  ಎಂದು ಎಚ್ಚರಿಸಲಾಗಿದೆ.

ಇದಲ್ಲದೆ, ಇಮ್ರಾನ್ ಖಾನ್ ಅವರ ಭದ್ರತಾ ವ್ಯವಸ್ಥೆಗಳ ಭಾಗವಾಗಿ ಬಾನಿ ಗಾಲಾದಲ್ಲಿರುವ ಅವರ ನಿವಾಸದ ಹೊರಗೆ ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಲಾಗಿದೆ.

ತಮ್ಮ ಸರ್ಕಾರದ ಪತನದ ನಂತರ, ಇಮ್ರಾನ್ ಖಾನ್ ದೇಶಾದ್ಯಂತ ಪ್ರತಿಭಟನಾ ಱಲಿಗಳನ್ನು ಪ್ರಾರಂಭಿಸಿದರು. ತೀವ್ರ ಬೆದರಿಕೆ ಎಚ್ಚರಿಕೆಗಳ ನಡುವೆಯೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಱಲಿಗಳನ್ನು ನಡೆಸಲು ಅನುಮತಿ ಕೇಳಿದ್ದಾರೆ.

ಸುದ್ದಿ ಓದಿ