ಅಂತರರಾಷ್ಟ್ರೀಯ

ಪ್ರಧಾನಿ ಇಟಲಿ, ಯುಕೆ ಪ್ರವಾಸ, ಪೋಪ್‌ ಫ್ರಾನ್ಸಿಸ್‌ ಭೇಟಿಯಾಗಲಿರುವ ಮೋದಿ

ಪ್ರಧಾನಿ  ಇಟಲಿ, ಯುಕೆ ಪ್ರವಾಸ,  ಪೋಪ್‌ ಫ್ರಾನ್ಸಿಸ್‌ ಭೇಟಿಯಾಗಲಿರುವ  ಮೋದಿ

ನವದೆಹಲಿ, 29: ಪ್ರಧಾನಿ ನರೇಂದ್ರ ಮೋದಿ  ಇಂದಿನಿಂದ     ನವೆಂಬರ್ 2 ರವರೆಗೆ   ನಾಲ್ಕು  ದಿನಗಳ    ಕಾಲ   ಇಟಲಿಯ  ರೋಮ್‌   ಇಂಗ್ಲೆಂಡ್ ನ  ಗ್ಲಾಸ್ಗೊ ನಗರಗಳಲ್ಲಿ  ಪ್ರವಾಸ ಕೈಗೊಳ್ಳಲಿದ್ದಾರೆ. ಇಟಲಿಯ ರಾಜಧಾನಿ ರೋಮ್​ನಲ್ಲಿ ಇದೇ 30 ರಿಂದ ನಡೆಯಲಿರುವ ಜಿ-20 ಶೃಂಗಸಭೆ,    ಗ್ಲಾಸ್ಗೊದಲ್ಲಿ  ನಡೆಯಲಿರುವ   ಸಿಓಪಿ- 26  ಜಾಗತಿಕ ನಾಯಕರ ಶೃಂಗಸಭೆಯಲ್ಲಿ  ಯಲ್ಲಿ ಭಾಗಿಯಾಗಲಿದ್ದಾರೆ.  

ರೋಮ್‌ ಗೆ  ತಲುಪಿದ ಮೊದಲ ದಿನ  ಮಹಾತ್ಮ ಗಾಂಧಿ ಅವರಿಗೆ  ನಮನ ಸಲ್ಲಿಸಲಿದ್ದಾರೆ.  ತಮ್ಮ ಎರಡು ದಿನಗಳ  ಭೇಟಿಯ ವೇಳೆ  ವ್ಯಾಟಿಕನ್‌ ನಲ್ಲಿ   ಕ್ರೈಸ್ತ  ಧರ್ಮಗುರು ಪೋಪ್‌  ಫ್ರಾನ್ಸಿಸ್‌   ಅವರನ್ನು ಭೇಟಿ ಮಾಡಲಿರುವುದಾಗಿ    ಪ್ರಧಾನಿ ಮೋದಿ ಗುರುವಾರ  ಟ್ವೀಟ್‌ ಮಾಡಿದ್ದಾರೆ.

ರೋಮ್‌ ನಲ್ಲಿ    16ನೇ   ಜಿ - 20  ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವೆ.  ಜಾಗತಿಕ ಆರ್ಥಿಕತೆ, ಕೊರೊನಾ ಸಾಂಕ್ರಾಮಿಕ ದಿಂದ  ಚೇತರಿಕೆ, ಸುಸ್ಥಿರ  ಅಭಿವೃದ್ದಿ ಹಾಗೂ ಹವಾಮಾನ ಬದಲಾವಣೆ ಕುರಿತು   ಜಿ.20 ದೇಶಗಳ  ಇತರ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ   ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು  ಹೇಳಿವೆ.

2020ರಲ್ಲಿ   ಕಾಣಿಸಿಕೊಂಡ  ಕೊರೊನಾ  ಸಾಂಕ್ರಾಮಿಕ ನಂತರ    ಮೊದಲ ಬಾರಿ  ಜಿ.20 ನಾಯಕರ ಶೃಂಗಸಭೆಯಲ್ಲಿ ತಾವು  ಖುದ್ದು  ಪಾಲ್ಗೊಳ್ಳುತ್ತಿದ್ದು  ಪ್ರಸಕ್ತ ಜಾಗತಿಕ ಪರಿಸ್ಥಿತಿ ಕುರಿತು   ಚರ್ಚೆ ನಡೆಸಲಿದ್ದೇವೆ.    ಸಾಂಕ್ರಾಮಿಕದಿಂದ      ಆರ್ಥಿಕ  ಪುನಶ್ಚೇತನವನ್ನು  ಬಲಗೊಳಿಸುವ  ಬಗ್ಗೆ    ಜಿ 20 ದೇಶಗಳು ಯಾವ ರೀತಿ ಮುಂದಾಗಬೇಕು ಎಂಬ ಬಗ್ಗೆ   ಆಲೋಚನೆಗಳನ್ನು ಹಂಚಿಕೊಳ್ಳಲಿದ್ದೇವೆ ಎಂದು ಮೋದಿ ವಿವರಿಸಿದ್ದಾರೆ.

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌  ಅವರ ಆಹ್ವಾನದ  ಮೇರೆಗೆ   ನವಂಬರ್‌  1-2ರಂದು  ಬ್ರಿಟನ್‌ ನ ಗ್ಲಾಸ್ಗೊ ಗೆ  ಭೇಟಿ ನೀಡಲಿದ್ದೇನೆ. ಜಿ 20 ಶೃಂಗಸಭೆಯ ಬಿಡುವಿನಲ್ಲಿ   ಇತರ ದೇಶಗಳ   ನಾಯಕರ ಭೇಟಿ ಮಾಡಿ   ಅ  ದೇಶಗಳೊಂದಿಗಿನ   ಭಾರತದ  ದ್ವಿಪಕ್ಷೀಯ ಸಂಬಂಧಗಳ  ಪ್ರಗತಿಯ ಬಗ್ಗೆ  ಪರಾಮರ್ಶೆ ನಡೆಸುವುದಾಗಿ  ಹೇಳಿದ್ದಾರೆ.

ಇಟಲಿ ಭೇಟಿಯ  ವೇಳೆ  ಪ್ರಧಾನಿ   ವ್ಯಾಟಿಕನ್‌ ಸಿಟಿಗೆ  ತೆರಳಿ  ನೀಡಿ  ಧರ್ಮಗುರು  ಪೋಪ್‌ ಫ್ರಾನ್ಸಿಸ್‌  ಅವರನ್ನು  ಭೇಟಿ  ಮಾಡಲಿದ್ದಾರೆ.

ನವಂಬರ್‌   1 ಹಾಗೂ  2ರಂದು  ಗ್ಲ್ಯಾಸ್ಗೋದಲ್ಲಿ ನಡೆಯಲಿರುವ COP-26 ಶೃಂಗಸಭೆಯಲ್ಲಿ  ಪ್ರಧಾನಿ  ಮೋದಿ  ಅವರು    ಜಗತ್ತಿನ  120 ದೇಶಗಳ  ನಾಯಕರು ಹಾಗೂ ಸರ್ಕಾರಿ ಮುಖ್ಯಸ್ಥ ರೊಂದಿಗೆ ಪಾಲ್ಗೊಳ್ಳಲಿದ್ದು,  ನಂತರ  ಪ್ರಧಾನಿ ಮೋದಿ    ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಇತರ ರಾಷ್ಟ್ರಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಲಿದ್ದಾರೆ.

ಸುದ್ದಿ ಓದಿ